ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಹಾಗು ಇನ್ನಿತರ ಘಟನೆಗಳು ಸಂಭವಿಸುವ ಸಂದರ್ಭಗಳಲ್ಲಿ ತುರ್ತಾಗಿ ಸ್ಪಂದಿಸಲು ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಹೊಸದಾದ ಕೆಎಸ್‍ಪಿ ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಈ ಮೊಬೈಲ್ ಆ್ಯಪ್‍ನ ಆವೃತ್ತಿಯನ್ನು ಗೂಗಲ್ ಪ್ಲೇಸ್ಟೋರ್‍ನಲ್ಲಿ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‍ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಸಾರ್ವ ಜನಿಕರು ಉಪಯೋಗಿಸಬಹುದಾಗಿದೆ. ಯಾವುದೇ Android and IOS ತಂತ್ರಾಂಶ ಹೊಂದಿರುವ ಮೊಬೈಲ್ ಫೋನ್‍ಗಳಲ್ಲಿ ಸದರಿ ಆ್ಯಪ್‍ನ್ನು ಬಳಸಬಹುದಾಗಿದ್ದು ಸುಲಲಿತವಾದ ಬಳಕೆಗೆ ಮೊಬೈಲ್ ಫೋನಿನಲ್ಲಿ ಇಂಟರ್‍ನೆಟ್…