ಮಹಿಳಾ, ಮಕ್ಕಳ ಸುರಕ್ಷತೆಗೆ ಪೊಲೀಸ್ ಆ್ಯಪ್
ಚಾಮರಾಜನಗರ

ಮಹಿಳಾ, ಮಕ್ಕಳ ಸುರಕ್ಷತೆಗೆ ಪೊಲೀಸ್ ಆ್ಯಪ್

July 6, 2018

ಚಾಮರಾಜನಗರ:  ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಹಾಗು ಇನ್ನಿತರ ಘಟನೆಗಳು ಸಂಭವಿಸುವ ಸಂದರ್ಭಗಳಲ್ಲಿ ತುರ್ತಾಗಿ ಸ್ಪಂದಿಸಲು ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಹೊಸದಾದ ಕೆಎಸ್‍ಪಿ ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿಪಡಿಸಲಾಗಿರುತ್ತದೆ.

ಈ ಮೊಬೈಲ್ ಆ್ಯಪ್‍ನ ಆವೃತ್ತಿಯನ್ನು ಗೂಗಲ್ ಪ್ಲೇಸ್ಟೋರ್‍ನಲ್ಲಿ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‍ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಸಾರ್ವ ಜನಿಕರು ಉಪಯೋಗಿಸಬಹುದಾಗಿದೆ. ಯಾವುದೇ Android and IOS ತಂತ್ರಾಂಶ ಹೊಂದಿರುವ ಮೊಬೈಲ್ ಫೋನ್‍ಗಳಲ್ಲಿ ಸದರಿ ಆ್ಯಪ್‍ನ್ನು ಬಳಸಬಹುದಾಗಿದ್ದು ಸುಲಲಿತವಾದ ಬಳಕೆಗೆ ಮೊಬೈಲ್ ಫೋನಿನಲ್ಲಿ ಇಂಟರ್‍ನೆಟ್ ಸೌಲಭ್ಯ ಹಾಗು ಜಿಪಿಎಸ್ ಸೌಲಭ್ಯಗಳು ಅವಶ್ಯವಾಗಿರುತ್ತದೆ.

ಸಾರ್ವಜನಿಕರು ಗೂಗಲ್ ಪ್ಲೇಸ್ಟೋ ರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‍ನಲ್ಲಿ ಲಭ್ಯವಿರುವ  Karnataka State Police (Official) ಎಂಬ ಹೆಸರಿನಲ್ಲಿರುವ ಈ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಸದರಿ ಆ್ಯಪ್‍ನ್ನು ರಿಜಿಸ್ಟರ್ ಮಾಡಿ ಕೊಳ್ಳುವ ಮುಖಾಂತರ ಉಪಯೋಗಿಸಬಹುದಾಗಿದೆ. ಈ ಆ್ಯಪ್‍ನಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಹೆಸರುಗಳು ಹಾಗೂ ದೂರವಾಣಿ ಸಂಖ್ಯೆ ಮತ್ತು ವಿಳಾಸಗಳನ್ನು ನಮೂದಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಬೇಕಾದ ಠಾಣೆಗಳಿಗೆ ಈ ಆ್ಯಪ್ ಮೂಲ ಕವೇ ನೇರವಾಗಿ ಕರೆ ಅಥವಾ ಇ-ಮೇಲ್‍ಗಳನ್ನು ಮಾಡಬಹುದಲ್ಲದೇ ಸದರಿ ಠಾಣೆ ಗಳಿಗೆ ಹೋಗಲು ಬೇಕಾದ ದಾರಿಯನ್ನು ಸಹಾ ಗೂಗಲ್ ಮ್ಯಾಪ್ ಮೂಲಕ ತಿಳಿದು ಕೊಳ್ಳಬಹುದಾಗಿದೆ. ಅಲ್ಲದೆ ಸದರಿ ಆ್ಯಪ್‍ನಲ್ಲಿರುವ Incident report ಆಯ್ಕೆ ಮೂಲಕ ಬಳಕೆದಾರರು ತುರ್ತು ಸಂದರ್ಭಗಳಲ್ಲಿ ಅಥವಾ ಯಾವುದೇ ದುರ್ಘಟನೆಗಳು ಸಂಭವಿ ಸಿದ ಸಂದರ್ಭದಲ್ಲಿ ಅಂತಹ ಮಾಹಿತಿಗಳನ್ನು ಈ ಆ್ಯಪ್‍ನ ಮೂಲಕ ಘಟನಾ ಸ್ಥಳದ ವಿವರ ಹಾಗೂ ಲೊಕೇಶನ್ ಮ್ಯಾಪ್‍ನೊಂದಿಗೆ ನೇರವಾಗಿ ವರದಿ ಮಾಡಿದರೆ ಜಿಲ್ಲಾ ನಿಯಂತ್ರಣ ಕೇಂದ್ರದ ಮೂಲಕ ಕೂಡಲೇ ಅಂತಹ ಘಟನೆಗಳ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆಗೆ ಉತ್ತಮ ಮಟ್ಟದ ಸಹಾಯ ವಾಗುವುದರಲ್ಲಿ ಅನುಮಾನವಿರುವುದಿಲ್ಲ. ಸಾರ್ವಜನಿಕರು ಈ ಮೊಬೈಲ್ ಆ್ಯಪ್‍ನ ಸದುಪಯೋಗ ಪಡೆಯುವಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

Translate »