ಐನೂರು ಮಾರಿಗುಡಿ ಜಾತ್ರೆ: ನಿಯಮ ಪಾಲಿಸಲು ಅರಣ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ

ಐನೂರು ಮಾರಿಗುಡಿ ಜಾತ್ರೆ: ನಿಯಮ ಪಾಲಿಸಲು ಅರಣ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ

July 6, 2018

ಚಾಮರಾಜನಗರ:  ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದ ಎ.ಎಂ. ಗುಡಿ ವಲಯದ ಐನೂರು ಮಾರಿಗುಡಿ ಜಾತ್ರೆ ಮಹೋತ್ಸವಕ್ಕೆ ನಿಗದಿಪಡಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿ ಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವ ಸಂಬಂಧ ಅಧಿ ಕಾರಿಗಳು ಹಾಗೂ ಜಾತ್ರೆ ಆಚರಣೆಯ ಸಮುದಾಯ ಪ್ರತಿನಿಧಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವವನ್ನು ಹಲವು ನಿಬಂಧನೆಗೆ ಒಳಪಟ್ಟು ಜುಲೈ 9ರಂದು ಮಾತ್ರ ಆಚರಿಸಲು ಅವಕಾಶ ಕಲ್ಪಿಸ ಲಾಗಿದೆ. ಅರಣ್ಯ ಗಡಿಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಸಂಚರಿ ಸಲು ಕಾಲಾವಕಾಶ ಸೀಮಿತಗೊಳಿಸ ಲಾಗಿದೆ. ದೇವಾಲಯವು ಹಾಗೂ ಇದರ ಪ್ರದೇಶವು ಹುಲಿ ಸಂರಕ್ಷಿತ ಪ್ರದೇಶ ವಾಗಿರುವುದರಿಂದ ನೀತಿ ನಿಯಮಗ ಳನ್ನು ಪಾಲನೆ ಮಾಡಬೇಕು ಎಂದರು.

ಪೂಜೆ ಸಾಮಗ್ರಿಗಳನ್ನು ಹೊರತು ಪಡಿಸಿ ತೆಂಗಿನಕಾಯಿ, ಬಾಳೆಹಣ್ಣು, ಕರ್ಪೂರ, ಗಂಧದಕಡ್ಡಿ, ಹೂವು, ಅರಿಶಿಣ, ಕುಂಕುಮದಂತಹ ಸಾಮಗ್ರಿಗಳನ್ನು ಮಾತ್ರ ನಿಯಮಿತ ಸಂಖ್ಯೆಯಲ್ಲಿ ಬಳ ಸಲು ಅನುಮತಿಸಲಾಗಿದೆ. ಪ್ಲಾಸ್ಟಿಕ್ ಸಾಮಗ್ರಿ ಗಳನ್ನು ಉಪಯೋಗಿಸುವಂತಿಲ್ಲ. ಧ್ವನಿ ವರ್ಧಕ, ಇತರೆ ಶಬ್ಧವರ್ಧಕಗಳನ್ನು ಬಳಸು ವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾನೂನು ಉಲ್ಲಂಘಿಸಿ ಅರಣ್ಯ ಪ್ರದೇಶ ದಲ್ಲಿ ಯಾವುದೇ ಅಂಗಡಿ ಮುಂಗಟ್ಟು ಗಳನ್ನು ತೆರೆದಲ್ಲಿ ಅಂಗಡಿ ಜಪ್ತಿ ಮಾಡಿ ವನ್ಯಜೀವಿ ಕಾಯ್ದೆಯಡಿ ಕ್ರಮ ಜರು ಗಿಸಲಾಗುತ್ತದೆ. ಅರಣ್ಯ ಪ್ರದೇಶದೊಳಗೆ ಮಚ್ಚು, ಕೊಡಲಿ ಸೇರಿದಂತೆ ಯಾವುದೇ ಮಾರಕಾಸ್ತ್ರ, ಆಯುಧಗಳನ್ನು ಕೊಂಡೊ ಯ್ಯುವುದು ಅಪರಾಧವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮರ ಕಡಿಯುವುದು, ವನ್ಯಜೀವಿಗಳಿಗೆ ತೊಂದರೆ ಕೊಡುವುದು, ಪ್ಲಾಸ್ಟಿಕ್ ಬಳಕೆ ಮಾಡುವುದು ಅಪರಾಧವಾಗಲಿದೆ. ಸರ್ಕಾರಿ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ದೇವಾಲಯದ ಸುತ್ತಲೂ ಪರಿಶುದ್ಧತೆ ಕಾಪಾಡಬೇಕು. ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ವಿಧಿಸಲಾಗಿರುವ ನಿಬಂಧನೆಗಳು, ನಿಯಮ ಗಳು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂಧರ್ ಕುಮಾರ್ ಮೀನಾ, ಬಂಡೀಪುರ ಹುಲಿ ಸಂರಕ್ಷಿತ ಪ್ರದೆಶದ ನಿರ್ದೇಶಕ ಅಂಬಾಡಿ ಮಾಧವ್, ಸಹಾಯಕ ಅರಣ್ಯ ಸಂರ ಕ್ಷಣಾಧಿಕಾರಿ ಪರಮೇಶ್, ಜಿಲ್ಲಾ ಪಂಚಾ ಯತ್ ಉಪ ಕಾರ್ಯದರ್ಶಿ ಮುನಿ ರಾಜಪ್ಪ ಇತರೆ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »