ಗ್ರಾಮೀಣ ಮಕ್ಕಳು ಪ್ರತಿಭಾವಂತರಾದಾಗ ಮಾತ್ರ ನಾಡಿನ ಪ್ರಗತಿ ಸಾಧ್ಯ
ಚಾಮರಾಜನಗರ

ಗ್ರಾಮೀಣ ಮಕ್ಕಳು ಪ್ರತಿಭಾವಂತರಾದಾಗ ಮಾತ್ರ ನಾಡಿನ ಪ್ರಗತಿ ಸಾಧ್ಯ

July 6, 2018

ಗುಂಡ್ಲುಪೇಟೆ:  ಗ್ರಾಮಾಂತರ ಪ್ರದೇಶದ ಮಕ್ಕಳೂ ಸಹ ವಿದ್ಯಾವಂತರಾದಾಗ ಮಾತ್ರ ನಾಡಿನ ಪ್ರಗತಿ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ ಎಂದು ಭ್ರಮರಾಂಬ ನಾಗರಾಜು ಟ್ರಸ್ಟ್‍ನ ಮುಖ್ಯಸ್ಥ ಕಿರಣಕುಮಾರ್ ಹೇಳಿದರು.

ತಾಲೂಕಿನ ಮಂಗಲ ಗ್ರಾಮದ ಉನ್ನತೀ ಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭ್ರಮರಾಂಬ ನಾಗರಾಜು ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪಠ್ಯ ಸಾಮಗ್ರಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಡಂಚಿನ ಗ್ರಾಮಗಳಲ್ಲಿ ಜನರು ಜೀವನೋಪಾಯ ಮಾಡುವುದೇ ಕಷ್ಟಕರ ವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕ ಳನ್ನು ಶಾಲೆಗೆ ಕಳುಹಿಸುವುದು ಹಾಗೂ ಕಲಿಕೆಗೆ ಅಗತ್ಯವಾದ ಪರಿಕರಗಳನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ದಿಂದ ಪ್ರತಿ ವರ್ಷವೂ ಗ್ರಾಮದ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಪರಿಕರ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು. ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಭೆ ಗಳಿದ್ದು, ವಿದ್ಯಾಕ್ಷೇತ್ರದಲ್ಲಿ ಹೆಚ್ಚಿನ ಬೆಳಕನ್ನು ಚೆಲ್ಲಲು ಎಲ್ಲರೂ ಸಹಕಾರ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ವತಿಯಂದ ಕಲಿಕಾ ಸಾಮಗ್ರಿಗಳು ಹಾಗೂ 400 ನೋಟ್‍ಬುಕ್ ಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಿಆರ್‍ಪಿ ಎಸ್.ಗೋಪಾಲ್, ಶಾಲೆಯ ಶಿಕ್ಷ ಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Translate »