`ಶುದ್ಧಿ’ ಮೊದಲನೇ ಅತ್ಯುತ್ತಮ ಚಿತ್ರ, ವಿಶೃತ್ ನಾಯಕ ಅತ್ಯುತ್ತಮ ನಟ, ತಾರಾ ಅನುರಾಧ ಅತ್ಯುತ್ತಮ ನಟಿ `ಹೆಬ್ಬೆಟ್ ರಾಮಕ್ಕ’, `ಹೆಬ್ಬುಲಿ’ಗೆ ತಲಾ ಮೂರು ಪ್ರಶಸ್ತಿ `ರಾಜಕುಮಾರ’, `ಮಾರ್ಚ್ 22’ಕ್ಕೆ ತಲಾ ಎರಡು ಪ್ರಶಸ್ತಿ ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮಾದೇಶ್ ಟಿ.ಭಾಸ್ಕರ್ ನಿರ್ಮಾಣದಲ್ಲಿ ಆದರ್ಶ್ ಹೆಚ್.ಈಶ್ವರಪ್ಪ ನಿರ್ದೇಶಿಸಿರುವ `ಶುದ್ಧಿ’ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕೂಡ್ಲೂರು ರಾಮಕೃಷ್ಣ ನಿರ್ದೇಶನದಲ್ಲಿ ಹರೀಶ್ ಶೇರ್‍ಗಾರ್ ನಿರ್ಮಿಸಿರುವ `ಮಾರ್ಚ್ 22’ ಎರಡನೇ ಅತ್ಯುತ್ತಮ ಚಿತ್ರ ಹಾಗೂ…