ಮೈಸೂರು: ಸರಸ್ವತಿಪುರಂನಲ್ಲಿರುವ ಮೈಸೂರು ವಿವಿಯ ಈಜುಕೊಳದಲ್ಲಿ ನಡೆದ 2ನೇ ದಿನದ ರಾಜ್ಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಬಾರೀ ಪೈಪೋಟಿ ಮೂಲಕ ಕಪಿಲ್ ಡಿ.ಶೆಟ್ಟಿ, ನೀನಾ ವೆಂಕಟೇಶ್ ಮತ್ತು ಸುವನ ಸಿ.ಭಾಸ್ಕರ್ ಅವರು ಹಳೇ ದಾಖಲೆ ಮುರಿದು, ನೂತನ ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕ ರಾಜ್ಯ ಈಜು ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಈಜು ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮೈಸೂರು ವಿವಿ ಈಜುಕೊಳದಲ್ಲಿ ಶುಕ್ರವಾರ ನಡೆದ ಪಂದ್ಯಾವಳಿಯ ಬಾಲಕರ ವಿಭಾಗದ 50ಮೀ ಬ್ಯಾಕ್‍ಸ್ಟ್ರೋಕ್ ಗ್ರೂಪ್ 2ರಲ್ಲಿ ಡಾಪ್‍ಫಿನ್ ಆಕ್ವಾಟಿಕ್ಸ್‍ನ ಕಪಿಲ್…