ಮೈಸೂರಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ: ಎರಡನೇ ದಿನವೂ ಮೂವರಿಂದ ನೂತನ ದಾಖಲೆ
ಮೈಸೂರು

ಮೈಸೂರಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ: ಎರಡನೇ ದಿನವೂ ಮೂವರಿಂದ ನೂತನ ದಾಖಲೆ

June 2, 2018

ಮೈಸೂರು:  ಸರಸ್ವತಿಪುರಂನಲ್ಲಿರುವ ಮೈಸೂರು ವಿವಿಯ ಈಜುಕೊಳದಲ್ಲಿ ನಡೆದ 2ನೇ ದಿನದ ರಾಜ್ಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಬಾರೀ ಪೈಪೋಟಿ ಮೂಲಕ ಕಪಿಲ್ ಡಿ.ಶೆಟ್ಟಿ, ನೀನಾ ವೆಂಕಟೇಶ್ ಮತ್ತು ಸುವನ ಸಿ.ಭಾಸ್ಕರ್ ಅವರು ಹಳೇ ದಾಖಲೆ ಮುರಿದು, ನೂತನ ದಾಖಲೆ ನಿರ್ಮಿಸಿದ್ದಾರೆ.

ಕರ್ನಾಟಕ ರಾಜ್ಯ ಈಜು ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಈಜು ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮೈಸೂರು ವಿವಿ ಈಜುಕೊಳದಲ್ಲಿ ಶುಕ್ರವಾರ ನಡೆದ ಪಂದ್ಯಾವಳಿಯ ಬಾಲಕರ ವಿಭಾಗದ 50ಮೀ ಬ್ಯಾಕ್‍ಸ್ಟ್ರೋಕ್ ಗ್ರೂಪ್ 2ರಲ್ಲಿ ಡಾಪ್‍ಫಿನ್ ಆಕ್ವಾಟಿಕ್ಸ್‍ನ ಕಪಿಲ್ ಡಿ.ಶೆಟ್ಟಿ(29.52ನಿ) ಕ್ರಮಿಸುವ ಮೂಲಕ ತಮ್ಮ ಹಳೇ ದಾಖಲೆ ಆಳಿಸಿದ್ದಾರೆ. ಹಾಗೆಯೇ ಬಾಲಕಿಯರ ವಿಭಾಗದ 50ಮೀ ಬ್ಯಾಕ್‍ಸ್ಟ್ರೋಕ್ ಗ್ರೂಪ್ 2ರಲ್ಲಿ ಡಾಲ್‍ಫಿನ್ ಆಕ್ವಾಟಿಕ್ಸ್‍ನ ನೀನಾ ವೆಂಕಟೇಶ್(32.19ನಿ) ಕ್ರಮಿಸಿ 2017ರಲ್ಲಿ ಸುವನ ಸಿ.ಭಾಸ್ಕರ್(32.38ನಿ) ನಿರ್ಮಿಸಿದ್ದ ರಾಜ್ಯ ದಾಖಲೆ ಮುರಿದರೆ, 50ಮೀ ಬ್ಯಾಕ್‍ಸ್ಟ್ರೋಕ್ ಗ್ರೂಪ್ 1ರಲ್ಲಿ ಡಾಲ್‍ಫಿನ್ ಆಕ್ವಾಟಿಕ್ಸ್‍ನ ಸುವನ ಸಿ.ಭಾಸ್ಕರ್(32.26ನಿ) ಕ್ರಮಿಸಿ 2015ರಲ್ಲಿ ಕೆ.ಹರಿಶ್ರೀ ಜೆ.ರಾಯ್(32.46ನಿ) ನಿರ್ಮಿಸಿದ್ದ ದಾಖಲೆ ಅಳಿಸಿದ್ದಾರೆ.

ಫಲಿತಾಂಶ ಇಂತಿದೆ: ಬಾಲಕರ ವಿಭಾಗ: 200ಮೀ. ಮಿಡ್ಲೆ ಗ್ರೂಪ್ 3: ಡಾಲ್‍ಫಿನ್ ಅಕ್ವಾಟಿಕ್ಸ್‍ನ ವಿಧಿತ್ ಎಸ್ ಶಂಕರ್(ಪ್ರ), ಕ್ರಿಶ್ ಸುಕುಮಾರ್(ದ್ವಿ), ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಅಮೋಘ್ ವಿ ಆನಂದ್(ತೃ). 200ಮೀ. ಮಿಡ್ಲೆ ಗ್ರೂಪ್ 4: ಡಾಲ್‍ಫಿನ್ ಅಕ್ವಾಟಿಕ್ಸ್‍ನ ಆರ್.ನವನೀತ್‍ಗೌಡ(ಪ್ರ), ರೇಣುಕಾಚಾರ್ಯ(ದ್ವಿ), ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಶಾರ್ವಿಲ್ ಲೋಕೇಶ್ ರೆಡ್ಡಿ(ತೃ). 200ಮೀ. ಮಿಡ್ಲೆ ಗ್ರೂಪ್ 2: ಪೂಜಾ ಆಕ್ವಾಟಿಕ್ ಸೆಂಟರ್‍ನ ಕಲ್ಪ್ ಎಸ್.ಬೋರಾ(ಪ್ರ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಉತ್ಕರ್ಷ ಎಸ್.ಪಾಟೀಲ್(ದ್ವಿ), ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಆರ್.ಹರ್ಷ(ತೃ).
200ಮೀ. ಮಿಡ್ಲೆ ಗ್ರೂಪ್ 1: ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಕುಶಾಲ್(ಪ್ರ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಶಿವಾನ್ಸ್ ಸಿಂಗ್(ದ್ವಿ), ಅಚ್ಯುತ್ ವಿ. ರಾಚೂರ್(ತೃ). 100 ಮೀ. ಬ್ರೇಸ್ಟ್ ಸ್ಟ್ರೋಕ್ ಗ್ರೂಪ್ 3: ಡಾಲ್‍ಫಿನ್ ಅಕ್ವಾಟಿಕ್ಸ್‍ನ ವಿಧಿತ್ ಎಸ್.ಶಂಕರ್(ಪ್ರ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಅಮಿಶ್ ಪ್ರಸಾದ್(ದ್ವಿ), ಡಾಲ್‍ಫಿನ್ ಅಕ್ವಾಟಿಕ್ಸ್‍ನ ಕ್ರಿಶ್ ಸುಕುಮಾರ್(ತೃ). 50 ಮೀ. ಬಟರ್‍ಫ್ಲೈ ಗ್ರೂಪ್ 4: ಡಾಲ್‍ಫಿನ್ ಅಕ್ವಾಟಿಕ್ಸ್‍ನ ರೇಣುಕಾಚಾರ್ಯ ಹೋದ್ಮನಿ(ಪ್ರ), ಆರ್.ನವನೀತ್‍ಗೌಡ(ದ್ವಿ), ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಶಾರ್ವಿಲ್ ಲೋಕೇಶ್ ರೆಡ್ಡಿ(ತೃ). 50 ಮೀ. ಫ್ರೀಸ್ಟೈಲ್ ಗ್ರೂಪ್ 2: ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಆರ್.ಶಾಂಭವ್(ಪ್ರ), ಸಮರ್ಥ್ ಸುಬ್ರಹ್ಮಣ್ಯರಾವ್(ದ್ವಿ), ಗ್ಲೋಬಲ್ ಸ್ವಿಮ್ ಟೀಮ್‍ನ ಎನ್.ವಿ.ಸಮರ್ಥ್(ತೃ).

50 ಮೀ. ಫ್ರೀಸ್ಟೈಲ್ ಗ್ರೂಪ್ 1: ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ತಾನಿಶ್ ಜಾರ್ಜ್ ಮ್ಯಾಥ್ಯೂ(ಪ್ರ), ವೈಭವ್ ಶೇಠ್(ದ್ವಿ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಪ್ರಖ್ಯಾತ್‍ಗೌಡ(ತೃ). 50 ಮೀ. ಬ್ಯಾಕ್‍ಸ್ಟ್ರೋಕ್ ಗ್ರೂಪ್ 2: ಕಲ್ಪನಾ ಡಿ.ಶೆಟ್ಟಿ(ಪ್ರ), ಧ್ಯಾನ್ ಬಾಲಕೃಷ್ಣ(ದ್ವಿ), ಪೂರ್ವಾಂಕ್ ರಮೇಶ್(ತೃ). 50 ಮೀ. ಬ್ಯಾಕ್‍ಸ್ಟ್ರೋಕ್ ಗ್ರೂಪ್ 1: ಶ್ರೀಹರಿ ನಟರಾಜ್(ಪ್ರ), ಆರ್.ಭವೇಶ್(ದ್ವಿ), ಶಿವಾನ್ಸ್ ಸಿಂಗ್(ತೃ). 4*50ಮೀ. ಮಿಡ್ಲೆ ಗ್ರೂಪ್ 3: ಡಾಲ್‍ಫಿನ್ ಆಕ್ವಟಿಕ್ಸ್(ಪ್ರ), ಬಿಎಸಿ-ಎ(ದ್ವಿ), ಪೂಜಾ ಆಕ್ವಾಟಿಕ್ ಸೆಂಟರ್(ತೃ). 4*100ಮೀ. ಫ್ರೀಸ್ಟೈಲ್ ಗ್ರೂಪ್ 2: ಬಿಎಸ್‍ಆರ್‍ಸಿ-ಎ(ಪ್ರ), ಬಿಎಸಿ-ಎ(ದ್ವಿ), ಬಿಎಸಿ-ಬಿ(ತೃ). 4*100ಮೀ. ಮಿಡ್ಲೆ ಗ್ರೂಪ್ 1: ಬಿಎಸ್‍ಆರ್‍ಸಿ-ಎ(ಪ್ರ), ಬಿಎಸಿ-ಎ(ದ್ವಿ), ಬಿಎಸ್‍ಆರ್‍ಸಿ-ಬಿ(ತೃ).
ಬಾಲಕಿಯರ ವಿಭಾಗ: 200ಮೀ. ಮಿಡ್ಲೆ ಗ್ರೂಪ್ 3: ಡಾಲ್‍ಫಿನ್ ಅಕ್ವಾಟಿಕ್ಸ್‍ನ ಅಂಬರ್ ಜೆ.ಸಿಂಗ್(ಪ್ರ), ಆಷ್ನಾ ಅಶ್ವಿನಿ ಮತ್ತೂರು(ದ್ವಿ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಸೃಷ್ಠಿ ಸತೀಶ್ವರ್(ತೃ). 200ಮೀ. ಮಿಡ್ಲೆ ಗ್ರೂಪ್ 4: ಪೂಜಾ ಆಕ್ವಾಟಿಕ್ ಸೆಂಟರ್‍ನ ವಿಹಿತಾ ನಯನ(ಪ್ರ), ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಸಬಾ ಸುಹಾನ(ದ್ವಿ), ಯಂಗ್ ಚಾಲೆಂಜರ್ಸ್ ಸ್ವಿಮ್ ಕ್ಲಬ್‍ನ ಪ್ರಿಯಾಂಶಿ ಮಿಶ್ರ(ತೃ). 200ಮೀ. ಮಿಡ್ಲೆ ಗ್ರೂಪ್ 2: ಡಾಲ್‍ಫಿನ್ ಅಕ್ವಾಟಿಕ್ಸ್‍ನ ಎ.ಜಡೇಜಾ(ಪ್ರ), ಯಂಗ್ ಚಾಲೆಂಜರ್ಸ್ ಸ್ವಿಮ್ ಕ್ಲಬ್‍ನ ಲತೇಶ್ ಮದ್ದಣ್ಣ(ದ್ವಿ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಆಧ್ಯಾ ನಾಯಕ್(ತೃ).

200ಮೀ. ಮಿಡ್ಲೆ ಗ್ರೂಪ್ 1: ಡಾಲ್‍ಫಿನ್ ಅಕ್ವಾಟಿಕ್ಸ್‍ನ ಸುವನ ಸಿ.ಭಾಸ್ಕರ್(ಪ್ರ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಜಿ.ಸಾಚಿ(ದ್ವಿ), ಬಿ.ಜಿ.ಮಧುರಾ(ತೃ). 100 ಮೀ. ಬ್ರೇಸ್ಟ್ ಸ್ಟ್ರೋಕ್ ಗ್ರೂಪ್ 3: ವಿಜಯನಗರ ಆಕ್ವಾಟಿಕ್ ಸೆಂಟರ್‍ನ ವಿ.ಹಿತೈಷಿ(ಪ್ರ), ಡಾಲ್‍ಫಿನ್ ಅಕ್ವಾಟಿಕ್ಸ್‍ನ ದಾತ್ರಿ ದರ್ಶನ್(ದ್ವಿ), ಅನ್ವಿತಾ ಎ.ಗೌಡ(ತೃ). 50 ಮೀ. ಬಟರ್‍ಫ್ಲೈ ಗ್ರೂಪ್ 4: ಪೂಜಾ ಆಕ್ವಾಟಿಕ್ ಸೆಂಟರ್‍ನ ವಿಹಿತಾ ನಯನ(ಪ್ರ), ಡಾಲ್‍ಫಿನ್ ಅಕ್ವಾಟಿಕ್ಸ್‍ನ ಮಾನವಿ ವರ್ಮ(ದ್ವಿ), ಯಂಗ್ ಚಾಲೆಂಜರ್ಸ್ ಸ್ವಿಮ್ ಕ್ಲಬ್‍ನ ಪ್ರಿಯಾಂಶಿ ಮಿಶ್ರ(ತೃ).

50 ಮೀ. ಫ್ರೀಸ್ಟೈಲ್ ಗ್ರೂಪ್ 2: ಡಾಲ್‍ಫಿನ್ ಅಕ್ವಾಟಿಕ್ಸ್‍ನ ನೀನಾ ವೆಂಕಟೇಶ್(ಪ್ರ), ಮಂಗಳಾ ಸ್ವಿಮ್ಮಿಂಗ್ ಕ್ಲಬ್‍ನ ರಚನಾ ಎಸ್.ಆರ್.ರಾವ್(ದ್ವಿ), ಸ್ಮೃತಿ (ತೃ). 50 ಮೀ. ಫ್ರೀಸ್ಟೈಲ್ ಗ್ರೂಪ್ 1: ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಸ್ಮøತಿ ಮಹಲಿಂಗಂ(ಪ್ರ), ಬಸವನಗುಡಿ ಆಕ್ವಾಟಿಕ್ ಸೆಂಟರ್‍ನ ಜೆ.ಹರ್ಷಿತಾ(ದ್ವಿ), ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್‍ನ ಮಯೂರಿ ಲಿಂಗರಾಜು(ತೃ). 50 ಮೀ. ಬ್ಯಾಕ್‍ಸ್ಟ್ರೋಕ್ ಗ್ರೂಪ್ 2: ನೀನಾ ವೆಂಕಟೇಶ್(ಪ್ರ), ಸಾನಿಯಾ ಡಿ ಸೌಜಾ(ದ್ವಿ), ರೀತು ಭರ್ಮರಡ್ಡಿ(ತೃ).

50 ಮೀ. ಬ್ಯಾಕ್‍ಸ್ಟ್ರೋಕ್ ಗ್ರೂಪ್ 1: ಸುವನ ಸಿ.ಭಾಸ್ಕರ್(ಪ್ರ), ಆರ್.ಭೂಮಿಕಾ(ದ್ವಿ), ಕೆ.ಕ್ಷಿತಿಜಾ(ತೃ). 4*50ಮೀ. ಮಿಡ್ಲೆ ಗ್ರೂಪ್ 3: ಬಿಎಸಿ-ಎ(ಪ್ರ), ವಿಜಯನಗರ ಅಕ್ವಾಟಿಕ್ ಸೆಂಟರ್(ದ್ವಿ), ಡಾಲ್‍ಫಿನ್ ಆಕ್ವಾಟಿಕ್ಸ್(ತೃ). 4*100ಮೀ. ಫ್ರೀಸ್ಟೈಲ್ ಗ್ರೂಪ್ 2: ಡಾಲ್‍ಫಿನ್ ಆಕ್ವಾಟಿಕ್ಸ್(ಪ್ರ), ಬಿಎಸಿ-ಎ(ದ್ವಿ), ಬಿಎಸ್‍ಆರ್‍ಸಿ(ತೃ). 4*100ಮೀ. ಮಿಡ್ಲೆ ಗ್ರೂಪ್ 1: ಬೆಂಗಳೂರು ಸ್ವಿಮ್ಮಿಂಗ್ ರಿಸರ್ಚ್ ಸೆಂಟರ್(ಪ್ರ), ಬಿಎಸಿ-ಎ(ದ್ವಿ), ಬಿಎಸಿ-ಬಿ(ತೃ).

Translate »