ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪರಿಷತ್‍ಗೆ ಚುನಾವಣೆ: ಜೂ.8ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ
ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪರಿಷತ್‍ಗೆ ಚುನಾವಣೆ: ಜೂ.8ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ

June 2, 2018

ಮೈಸೂರು:  ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಜೂ.8ರಂದು ಚುನಾವಣೆ ನಡೆಯಲಿದ್ದು, ನಿಗದಿತ ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತ ಚಲಾಯಿಸಬಹುದು.

ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ, ತಿ.ನರಸೀಪುರದ ಮಿನಿ ವಿಧಾನಸೌಧ, ಹುಣಸೂರು ಹಾಗೂ ನಂಜನಗೂಡು ತಾಲೂಕು ಕಚೇರಿ ಮತಗಟ್ಟೆ ಕೇಂದ್ರಗಳಲ್ಲಿ ಆಯಾ ತಾಲೂಕಿನ ಶಿಕ್ಷಕರು ಮತ ಚಲಾಯಿಸಬಹುದು. ಮೈಸೂರು ನಗರದ ಪೀಪಲ್ಸ್ ಪಾರ್ಕ್ ಬಳಿಯಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 1ರಲ್ಲಿ ಮೈಸೂರು ತಾಲೂಕಿನ ಕ್ರಮ ಸಂಖ್ಯೆ 1ರಿಂದ 799 ರವರೆಗೆ, ಕೊಠಡಿ ಸಂಖ್ಯೆ 2ರಲ್ಲಿ ಕ್ರಮ ಸಂಖ್ಯೆ 800ರಿಂದ 1716ರವರೆಗಿನ ಮತದಾರರು ಮತ ಹಾಕಬಹುದಾಗಿದೆ.

ಮೈಸೂರಿನ ವಲಯ ಕಚೇರಿ 5ರ ಪೂರ್ಣ ಪ್ರದೇಶ, 25, 26, 27, 28, 29ನೇ ವಾರ್ಡ್, ವಿಜಯನಗರ 1 ಹಾಗೂ 2ನೇ ಹಂತ, ಹೆಬ್ಬಾಳು, ಮಂಚೇಗೌಡನ ಕೊಪ್ಪಲು, ಕುಂಬಾರಕೊಪ್ಪಲು, ಮೇಟಗಳ್ಳಿ, ಲೋಕನಾಯಕನಗರ, ಕರಕುಶಲನಗರ, ಬಿ.ಎಂ.ಶ್ರೀನಗರ ಹಾಗೂ ಜಯದೇವನಗರ ವ್ಯಾಪ್ತಿಯ ಶಿಕ್ಷಕರು, ವಿಜಯನಗರ 2ನೇ ಹಂತದಲ್ಲಿರುವ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆಟ್ರ್ಸ್ ಸಂಸ್ಥೆಯ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಬೇಕು.

ವಲಯ ಕಚೇರಿ 4ರ ವ್ಯಾಪ್ತಿಯ ಪೂರ್ಣ ಪ್ರದೇಶ, 23, 30, 31, 32, 33ನೇ ವಾರ್ಡ್, ವಿಜಯಶ್ರೀಪುರ, ಮಾನಸಗಂಗೋತ್ರಿ, ಜಯಲಕ್ಷ್ಮೀಪುರಂ, ವಿನಾಯಕನಗರ, ವಿ.ವಿ.ಮೊಹಲ್ಲಾ, ಯಾದವಗಿರಿ, ಸಿಎಫ್‍ಟಿಆರ್‍ಐ ವಸತಿ ಗೃಹಗಳು, ಬೃಂದಾವನ ಬಡಾವಣೆ, ಗೋಕುಲಂ, ಮಂಜುನಾಥಪುರ ಹಾಗೂ ಒಂಟಿಕೊಪ್ಪಲು ವ್ಯಾಪ್ತಿಯ ಮತದಾರರು, ಗೋಕುಲಂನ ಕಾಂಟೂರು ರಸ್ತೆಯಲ್ಲಿರುವ ಮೈಸೂರು ವೆಸ್ಟ್ ಲಯನ್ಸ್ ಸೇವಾ ನಿಕೇತನ ಶಾಲೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಬೇಕಿದೆ.
ವಲಯ ಕಚೇರಿ 8ರ ಪೂರ್ಣ ಪ್ರದೇಶ, 46, 47, 49, 50, 51, 52, 53, 54ನೇ ವಾರ್ಡ್, ರಾಜೇಂದ್ರನಗರ, ಕೆಸರೆ, ಒ.ಡಿ.ಬ್ಲಾಕ್, ಸುಭಾಷ್‍ನಗರ, ಎನ್.ಆರ್.ಮೊಹಲ್ಲಾ, ರಾಜೀವ್‍ನಗರ, ಶಾಂತಿನಗರ, ಉದಯಗಿರಿ, ಗೌಸಿಯಾನಗರ, ನಾಯ್ಡುನಗರ ಹಾಗೂ ಸತ್ಯನಗರ ವ್ಯಾಪ್ತಿಯ ಶಿಕ್ಷಕರು ರಾಜೇಂದ್ರನಗರದ ನಗರ ಪಾಲಿಕೆ ಕಟ್ಟಡದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಕೇಂದ್ರದಲ್ಲಿ ಮತ ಹಾಕಬೇಕು.

ವಲಯ ಕಚೇರಿ 7ರ ವ್ಯಾಪ್ತಿಯ 39, 40, 41, 42, 43, 44, 45, 64ನೇ ವಾರ್ಡ್, ತಿಲಕನಗರ, ಕೈಲಾಸಪುರಂ, ಬಡೇಮಕಾನ್, ಈದ್ಗಾ, ಶಿವರಾತ್ರೀಶ್ವರ ನಗರ, ಸಿದ್ಧಿಖಿ ನಗರ, ಬನ್ನಿಮಂಟಪ, ಕರುಣಾಪುರ, ಗಾಂಧಿನಗರ, ವೀರನಗೆರೆ, ಬನ್ನಿಮಂಟಪ ಎ, ಬಿ, ಸಿ ಬಡಾವಣೆ ಹಾಗೂ ನಜರ್‍ಬಾದ್ ವ್ಯಾಪ್ತಿಯ ಮತದಾರರು, ಬಿ.ಎನ್.ರಸ್ತೆಯಲ್ಲಿರುವ ಸಂತ ಫಿಲೋಮಿನಾ ಕಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಮತಗಟ್ಟೆ ಕೇಂದ್ರದಲ್ಲಿ ಹಾಗೂ ವಲಯ ಕಚೇರಿ 6ರ 34, 35, 36, 37, 38, ಶಿವರಾಂಪೇಟೆ, ಕೊತ್ವಾಲ್ ರಾಮಯ್ಯ ರಸ್ತೆ, ದಿವಾನ್ಸ್ ರಸ್ತೆ, ಡಿ.ಬನುಮಯ್ಯ ರಸ್ತೆ, ಕುಂಬಾರಗೇರಿ, ಅಶೋಕ ರಸ್ತೆ, ಸೊಪ್ಪಿನಕೇರಿ, ಮಂಡಿಮೊಹಲ್ಲಾ, ಬಂಬೂಬಜಾರ್, ಮೇದರ್ ಬ್ಲಾಕ್, ದೇವರಾಜ ಅರಸು ರಸ್ತೆ, ಹಳೇ ಬಂಡಿಕೇರಿ, ಕುರುಬರಗೇರಿ, ಸೋನಾರ್ ರಸ್ತೆ ಹಾಗೂ ಆಯಿಲ್ ಮಿಲ್ ರಸ್ತೆ ವ್ಯಾಪ್ತಿಯ ಮತದಾರರು, ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರೌಢಶಾಲೆ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಬೇಕು.

ವಲಯ ಕಚೇರಿ 9ರ 55, 56, 57, 58, 59, 60, 61, 62, 63, 65ನೇ ವಾರ್ಡ್, ಸಿದ್ದಾರ್ಥನಗರ, ಜೆ.ಸಿ.ನಗರ, ಕೆ.ಸಿ.ನಗರ, ಕುರುಬಾರಹಳ್ಳಿ, ಲಲಿತಮಹಲ್‍ನಗರ(ಆಲನಹಳ್ಳಿ), ಕೆ.ಎಸ್.ಆರ್ ವಸತಿಗೃಹಗಳು, ಯರಗನಹಳ್ಳಿ, ಇಂದಿರಾನಗರ, ಇಟ್ಟಿಗೆಗೂಡು, ರಾಘವೇಂದ್ರನಗರ, ಶಕ್ತಿನಗರ, ಜಲಪುರಿ, ಗಾಯತ್ರಿಪುರಂ, ಕಲ್ಯಾಣಗಿರಿ, ಶಿಕ್ಷಕರ ಬಡಾವಣೆ, ವಿದ್ಯಾನಗರ, ಗುರುರಾಜ ಬಡಾವಣೆ, ಜ್ಯೋತಿನಗರ, ಕ್ಯಾತಮಾರನಹಳ್ಳಿ, ಅಜೀಜ್‍ಸೇಠ್ ನಗರ ಹಾಗೂ ನೆಹರೂ ನಗರ, ಸಿದ್ದಾರ್ಥನಗರದಲ್ಲಿರುವ ಗೀತಾ ಶಿಶು ಶಿಕ್ಷಣ ಸಂಸ್ಥೆಯ ನರ್ಸರಿ ಮತ್ತು ಪ್ರೈಮರಿ ಶಾಲೆ ಮತಗಟ್ಟೆಯ ವ್ಯಾಪ್ತಿಗೆ ಒಳಪಡುತ್ತವೆ.

ವಲಯ ಕಚೇರಿ 2ರ 7, 8, 9, 10, 11, 12, 13, 14ನೇ ವಾರ್ಡ್, ಜೆ.ಪಿ.ನಗರ, ವಿಶ್ವೇಶ್ವರನಗರ, ಅಶೋಕಪುರಂ, ನಾಚನಹಳ್ಳಿ ಪಾಳ್ಯ, ಕೃಷ್ಣಮೂರ್ತಿಪುರಂ, ಜಯನಗರ, ಶ್ರೀರಾಂಪುರ, ವಿವೇಕಾನಂದ ನಗರ ಹಾಗೂ ಅರವಿಂದನಗರ ಬಡಾವಣೆಗಳು, ಕೃಷ್ಣಮೂರ್ತಿಪುರಂ 6ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಕೇಂದ್ರದ ವ್ಯಾಪ್ತಿಗೆ ಬರಲಿವೆ.

ವಲಯ ಕಚೇರಿ 3ರ 15, 16, 17, 18, 19, 20, 21, 22, 24ನೇ ವಾರ್ಡ್, ಕುವೆಂಪುನಗರ, ಕೆ.ಜಿ.ಕೊಪ್ಪಲು, ಚಾಮರಾಜಪುರಂ, ಟಿ.ಕೆ.ಬಡಾವಣೆ, ಜನತಾನಗರ, ಸರಸ್ವತಿಪುರಂ, ಕುಕ್ಕರಹಳ್ಳಿ, ವಾಗ್ದೇವಿ ನಗರ, ಗಂಗೋತ್ರಿ ಬಡಾವಣೆ , ರಾಮಕೃಷ್ಣನಗರ, ದಟ್ಟಗಳ್ಳಿ(ಕನಕದಾಸನಗರ) ಹಾಗೂ ಶಾರದಾದೇವಿ ನಗರ ವ್ಯಾಪ್ತಿಯ ಕ್ರಮ ಸಂಖ್ಯೆ 1ರಿಂದ 600ರವರೆಗೆ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಶಿಕ್ಷಣ ಸಂಸ್ಥೆಯ 1ನೇ ಕೊಠಡಿ ಹಾಗೂ ಕ್ರಮ ಸಂಖ್ಯೆ 601ರಿಂದ 1192ರವರೆಗಿನ ಮತದಾರರು 2ನೇ ಕೊಠಡಿಯಲ್ಲಿ ಮತ ಚಲಾಯಿಸಬೇಕು.

ವಲಯ ಕಚೇರಿ 1ರ 1, 2, 3, 4, 5, 6ನೇ ವಾರ್ಡ್ ಗೌರಿಶಂಕರನಗರ, ಗುಂಡೂರಾವ್‍ನಗರ, ಕನಕಗಿರಿ, ಮೇದರಕೇರಿ, ಬಂಡಿಕೇರಿ, ಚಾಮುಂಡಿಪುರಂ, ಲಕ್ಷ್ಮೀಪುರಂ, ಅಗ್ರಹಾರ, ರಾಮಾನುಜ ರಸ್ತೆ, ಬಸವೇಶ್ವರ ರಸ್ತೆ, ಬಿ.ಬಿ.ಗಾರ್ಡ್‍ನ್, ತ್ಯಾಗರಾಜ ರಸ್ತೆ, ಉತ್ತರಾಧಿಮಠ ರಸ್ತೆ, ಸುಣ್ಣದಕೇರಿ ಬನುಮಯ್ಯ ರಸ್ತೆ, ದೇವಾಂಬ ಅಗ್ರಹಾರ, ಮಾಧ್ವಾಚಾರ್ ರಸ್ತೆ, ಹುಲ್ಲಿನಬೀದಿ ಹಾಗೂ ಹೊಸಕೇರಿ ವ್ಯಾಪ್ತಿಯ ಶಿಕ್ಷಕರು, ರಾಮಾನುಜ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕಿದೆ.

Translate »