ಮೈಸೂರು: ವಿಶ್ವ ಶೌಚಾಲಯ ದಿನಾಚರಣೆ ಸಂದರ್ಭದಲ್ಲಿ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ 42ನೇ ವಾರ್ಡ್‍ನಲ್ಲಿ ನಗರಪಾಲಿಕೆಯ ಎಸ್‍ಎಫ್‍ಸಿ ಅನುದಾನದಡಿ ತಲಾ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಎರಡು ಸಾರ್ವಜನಿಕ ಶೌಚಾಲಯಗಳಿಗೆ ಚಾಮ ರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಸೋಮವಾರ ಉದ್ಘಾಟನೆ ನೆರವೇರಿಸಿದರು. ಚಾಮರಾಜಪುರಂ ರೈಲ್ವೆ ನಿಲ್ದಾಣ ಸಮೀಪದ ಟೆನ್ನಿಸ್ ಕೋರ್ಟ್ ಹಾಗೂ ಅಪೋಲೋ ಆಸ್ಪತ್ರೆ ಸಮೀಪದ ಸಿಗ್ನಲ್ ವೃತ್ತದ ಬಳಿ ಸಾರ್ವಜನಿಕ ಸುಲಭ ಶೌಚಾ ಲಯ ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ವಿಶೇಷವಾಗಿ ನಿರ್ಮಿ ಸಲಾಗಿರುವ ಶೌಚಾಲಯದಲ್ಲಿ ಭಾರ…