ಕೆ.ಜಿ.ಕೊಪ್ಪಲಿನಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ಉದ್ಘಾಟನೆ
ಮೈಸೂರು

ಕೆ.ಜಿ.ಕೊಪ್ಪಲಿನಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ಉದ್ಘಾಟನೆ

November 20, 2018

ಮೈಸೂರು: ವಿಶ್ವ ಶೌಚಾಲಯ ದಿನಾಚರಣೆ ಸಂದರ್ಭದಲ್ಲಿ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ 42ನೇ ವಾರ್ಡ್‍ನಲ್ಲಿ ನಗರಪಾಲಿಕೆಯ ಎಸ್‍ಎಫ್‍ಸಿ ಅನುದಾನದಡಿ ತಲಾ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಎರಡು ಸಾರ್ವಜನಿಕ ಶೌಚಾಲಯಗಳಿಗೆ ಚಾಮ ರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಸೋಮವಾರ ಉದ್ಘಾಟನೆ ನೆರವೇರಿಸಿದರು.

ಚಾಮರಾಜಪುರಂ ರೈಲ್ವೆ ನಿಲ್ದಾಣ ಸಮೀಪದ ಟೆನ್ನಿಸ್ ಕೋರ್ಟ್ ಹಾಗೂ ಅಪೋಲೋ ಆಸ್ಪತ್ರೆ ಸಮೀಪದ ಸಿಗ್ನಲ್ ವೃತ್ತದ ಬಳಿ ಸಾರ್ವಜನಿಕ ಸುಲಭ ಶೌಚಾ ಲಯ ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ವಿಶೇಷವಾಗಿ ನಿರ್ಮಿ ಸಲಾಗಿರುವ ಶೌಚಾಲಯದಲ್ಲಿ ಭಾರ ತೀಯ ಮತ್ತು ವಿದೇಶಿ ಶೌಚಾಲಯ ವ್ಯವಸ್ಥೆಯನ್ನು ಇದು ಒಳಗೊಂಡಿದೆ.

ಶೌಚಾಲಯಗಳ ಉದ್ಘಾಟನೆ ನೆರವೇ ರಿಸಿದ ಬಳಿಕ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಸಾರ್ವಜನಿಕರು ಬಯಲು ಶೌಚವನ್ನು ಬಿಟ್ಟು, ನಿಮ ಗೆಂದೇ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯವನ್ನೇ ಬಳಸಿಕೊಳ್ಳಬೇಕು. ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳ ಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಶಿವಕುಮಾರ್, ಆಯುಕ್ತ ಕೆ. ಎಚ್.ಜಗದೀಶ್, ಕಾರ್ಯಪಾಲಕ ಅಭಿ ಯಂತರ ಮಹೇಶ್, ರಾಮಕೃಷ್ಣಯ್ಯ, ಅಧೀಕ್ಷಕ ಅಭಿಯಂತರ ಸುರೇಶ್, ಅಭಿ ವೃದ್ಧಿ ಅಧಿಕಾರಿ ಗಂಗಾಧರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಂಜಿತ್ ಕುಮಾರ್, ಕಿರಿಯ ಅಭಿಯಂತರ ವೆಂಕಟೇಶ್ ಇನ್ನಿತರರು ಭಾಗವಹಿಸಿದ್ದರು

Translate »