ಸಾವಿರಾರು ಶೌಚಾಲಯ ನಿರ್ಮಾಣಕ್ಕೆ ಕಾರಣರಾದ  ಸಾಧಕರಿಗೆ ಸ್ವಚ್ಛ ಭಾರತ್ ಮಿಷನ್‍ನಿಂದ ಸನ್ಮಾನ
ಮೈಸೂರು

ಸಾವಿರಾರು ಶೌಚಾಲಯ ನಿರ್ಮಾಣಕ್ಕೆ ಕಾರಣರಾದ ಸಾಧಕರಿಗೆ ಸ್ವಚ್ಛ ಭಾರತ್ ಮಿಷನ್‍ನಿಂದ ಸನ್ಮಾನ

November 20, 2018

ಮೈಸೂರು: ಗ್ರಾಮಾಂ ತರ ಪ್ರದೇಶದಲ್ಲಿ ಜನರ ಮನವೊಲಿಸಿ ಮೈಸೂರು ಜಿಲ್ಲೆಯಲ್ಲಿ ಸಾವಿರಾರು ಶೌಚಾ ಲಯಗಳು ನಿರ್ಮಾಣಗೊಳ್ಳಲು ಕಾರಣ ರಾದ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಸಾಧಕರನ್ನು ಸೋಮವಾರ ಮೈಸೂರು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಗೌರವಿಸಲಾಯಿತು.

ಹೆಚ್.ಡಿ.ಕೋಟೆ ತಾಲೂಕಿನ ಬೆಲುವೇ ಗೌಡ (245 ಶೌಚಾಲಯ), ಗ್ರಾಪಂ ಸದಸ್ಯ ಶಿವಕುಮಾರ್ (192), ಬನ್ನಿಕುಪ್ಪೆ ಚೆಲುವ ರಾಜ್ (280), ಕೆ.ಆರ್.ನಗರದ ಸಂಗೀತಾ (300), ಹುಣಸೂರಿನ ಮಾದೇಶ್ (200), ಮಹೇಶ್ (250), ಮೈಸೂರು ತಾಲೂಕಿನ ರವಿಕುಮಾರ್ (300), ದೇವಲಾಪುರ ಗ್ರಾಪಂ ಸದಸ್ಯ ನಾಗರಾಜು (608), ನಂಜನಗೂಡು ತಾಲೂಕಿನ ಯಶೋಧಾ (250), ಮಲ್ಲೇಶ್, ವೆಂಕಟೇಶ್, ಕಾಂತಾಮಣಿ ಇವರೆಲ್ಲರೂ ಜನರನ್ನು ಹುರಿದುಂಬಿಸಿ ನೂರಾರು ಶೌಚಾಲಯಗಳ ನಿರ್ಮಾಣಕ್ಕೆ ಶ್ರಮಿಸಿ ದ್ದರು. ಇವರಿಗೆ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ ಸನ್ಮಾನಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ, ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಹೊರ ತರಲಾಗಿರುವ `ಸ್ವಾತಂತ್ರ್ಯ ಕ್ಕಿಂತ ಮುಖ್ಯ ಸ್ವಚ್ಛತೆ’ ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಕೊಳ್ಳಬೇಕು. ಬಯಲು ಶೌಚಾಲಯ ಮುಕ್ತ ಜಿಲ್ಲೆ ಮಾಡಲು ಸಾರ್ವಜನಿಕರು ಸಹಕರಿಸ ಬೇಕು. ಪರಿಸರ ನೈರ್ಮಲ್ಯವನ್ನು ಕಾಪಾಡ ಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಓ ಕೆ.ಜ್ಯೋತಿ ಅವರು `ಸ್ವಚ್ಛ ಮೇವ ಜಯತೇ’ ಪ್ರತಿಜ್ಞಾ ವಿಧಿ ಬೋಧಿ ಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, 2014ರಲ್ಲಿ ಆರಂಭವಾದ ನೈರ್ಮಲ್ಯ ಯೋಜನೆ ನಂತರ, ಸ್ವಚ್ಛ ಭಾರತವಾಗಿ ಪರಿವರ್ತನೆಗೊಂಡಿತು. ಬಯಲು ಬಹಿ ರ್ದೆಸೆ ಮುಕ್ತ ಕರ್ನಾಟಕ ಘೋಷಣೆ ಯಾಗುತ್ತಿದೆ. ಮೈಸೂರು ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಗೊಂಡಿದ್ದರೂ, ಎಲ್ಲರಿಗೂ ಈ ಸೌಲಭ್ಯ ತಲುಪಿದೆಯೇ? ಯಾರು ಇನ್ನೂ ಶೌಚಾ ಲಯಗಳನ್ನು ಕಟ್ಟಿಸಿಕೊಂಡಿಲ್ಲ ಎಂಬುದನ್ನು ಗುರ್ತಿಸಿ, ಅನುದಾನ ಬಿಡುಗಡೆ ಮಾಡಿ, ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ `ನೈರ್ಮಲ್ಯ ಮತ್ತು ಸ್ವಚ್ಛತೆ’ ಕುರಿತು ಉಪನ್ಯಾಸ ನೀಡಿದ ಪರಿ ಸರವಾದಿ ರವಿಕುಮಾರ್, ನೀರಿನ ಬಳಕೆ ಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿ ವ್ಯತ್ಯಾಸವಿದೆ. ನಗರ ಪ್ರದೇಶಗಳ ಶೌಚಾಲಯಗಳಲ್ಲಿ ನಾವು 40 ಲೀ. ಶುದ್ಧ ನೀರನ್ನು ವ್ಯಯ ಮಾಡುತ್ತಿದ್ದೇವೆ. ಕುಡಿ ಯುವ ನೀರಿನ ಸಂಪನ್ಮೂಲ ಕಾಪಾಡಿ ಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಆದರೆ ಶೌಚಾಲಯಕ್ಕೆ ಬಳಸಿದ ಶುದ್ಧ ನೀರು ಚರಂಡಿ ಸೇರುತ್ತಿದೆ. ಶೌಚಾಲಯ ಬಳಕೆ ಯಲ್ಲಿ ಮುಂಚೂಣಿಯಲ್ಲಿರುವ ನಾವು ಸುಸ್ಥಿರ ನಿರ್ವಹಣೆಗೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಶೌಚಾಲಯಗಳಿಗೆ ಒತ್ತು ನೀಡಬೇಕು. ಒಣ ಶೌಚಾಲಯ ಮಾಡಿ ರುವ ಕಡೆ ಅದು ಕುಡಿಯುವ ನೀರಿನಲ್ಲಿ ಸೇರದಂತೆ ನೋಡಿಕೊಳ್ಳಬೇಕಾದುದು ಅಗತ್ಯ ಎಂದು ಹೇಳಿದರು.

ಗಮನ ಸೆಳೆದ ಬೀದಿ ನಾಟಕ: ಇದಕ್ಕೂ ಮೊದಲು ಸ್ಪಂದನ ಕಲಾತಂಡ, ಅನಿಕೇ ತನ ಕಲಾ ಬಳಗದ ಕಲಾವಿದರು, ಪ್ಲಾಸ್ಟಿಕ್ ಬಳಕೆ ಬಿಡಿ, ನೀರು ಮಿತವಾಗಿ ಬಳಸಿ, ಬಯಲು ಶೌಚಾಲಯ ಬಿಡಿ, ಪರಿಸರ ನೈರ್ಮಲ್ಯ ಕಾಪಾಡಿ ಎಂಬ ಸಂದೇಶ ನೀಡುವ ಬೀದಿ ನಾಟಕ ಪ್ರದರ್ಶಿಸಿ, ಗಮನ ಸೆಳೆದರು.

ಇದಕ್ಕೂ ಮುನ್ನ ಸರಸ್ವತಿಪುರಂ ಜೆಎಸ್‍ಎಸ್ ವಿದ್ಯಾಲಯ, ಮಹಾ ಬೋಧಿ ಶಾಲೆ, ಮಹಾರಾಜ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಜಾಥಾ ನಡೆಸಿ, ಘೋಷಣೆಗಳನ್ನು ಕೂಗುತ್ತಾ ಕಲಾಮಂದಿರ ತಲುಪಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೃಷ್ಣ, ಮಂಗಳಾ ಸೋಮ ಶೇಖರ್, ಡಾ.ರೂಪಾ, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಸಹಾಯಕ ನಿರ್ದೇಶಕ ಮನೋಜ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »