ದಿನೇಶ್ ಕೋಚಿಂಗ್ ಸೆಂಟರ್‍ನಿಂದ ಪ್ರತಿಭಾ ಪುರಸ್ಕಾರ
ಮೈಸೂರು

ದಿನೇಶ್ ಕೋಚಿಂಗ್ ಸೆಂಟರ್‍ನಿಂದ ಪ್ರತಿಭಾ ಪುರಸ್ಕಾರ

November 20, 2018

ಮೈಸೂರು: ಮಕ್ಕಳು ಮತ್ತು ಯುವಕರು ಬರೀ ಅಕ್ಷರಸ್ಥರಾದರೆ ಸಾಲದು, ಬದಲಾಗಿ ಶಿಕ್ಷಣವಂತ ರಾಗಬೇಕು. ಯಾವ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಕಲಿಯುವುದಿಲ್ಲವೋ, ಅವ ನಿಂದ ಭವಿಷ್ಯದಲ್ಲಿ ಆರೋಗ್ಯಕರ ಸಮಾಜಕ್ಕೆ ಏನನ್ನೂ ನಿರೀಕ್ಷಿಸುವುದು ಕಷ್ಟ. ಪೆÇೀಷಕರು ಮಕ್ಕಳಿಗೆ ಈ ವಯ ಸ್ಸಿನಲ್ಲೇ ಅದನ್ನು ಕಲಿಸಬೇಕು ಎಂದು ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ಡಾ. ವೀರೇಶಾನಂದ ಸರಸ್ವತೀ ಸ್ವಾಮಿಗಳು ಅಭಿಪ್ರಾಯಪಟ್ಟರು.

ದೇಶಪ್ರೇಮದ ಬಗ್ಗೆ ಸ್ವಾಮೀಜಿಯವರು ಮಾತ ನಾಡುತ್ತಾ, ಸ್ವಾಮಿ ವಿವೇಕಾನಂದರು, ಆದಿ ಶಂಕ ರಾಚಾರ್ಯರು ಹುಟ್ಟಿದ ಈ ಪುಣ್ಯಭೂಮಿಯಲ್ಲಿರುವ ನಾವು ಭಾರತೀಯ ಸಂಸ್ಕೃತಿಯನ್ನು ಮರೆಯಬಾರದು. ಯುವಶಕ್ತಿಯನ್ನುದ್ದೇಶಿಸಿ ಮಾತನಾಡುತ್ತಾ, ಇಂದು ಜನ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು ಕರ್ತವ್ಯವನ್ನು ಮರೆತಿದ್ದಾರೆ. ಯೋಗದ ಮಹತ್ವವನ್ನು ಹೇಳುತ್ತಾ, ಇಂದು ಭಾರತ ವಿಶ್ವಗುರು ಪಟ್ಟದೆಡೆಗೆ ತಲುಪಲು ನಮ್ಮ ಶ್ರೇಷ್ಠ ಸಂಸ್ಕೃತಿಯ ತಳಹದಿಯೇ ಕಾರಣ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ನಿಮ್ಮ ಯಶಸ್ಸಿನ ಶಕ್ತಿ ನೀವೇ ಮತ್ತು ನಿಮ್ಮ ವಿಫಲತೆಗೆ ನೀವೇ ಕಾರಣರಾಗು ತ್ತೀರಿ. ಅಂಕಗಳನ್ನು ಗಳಿಸುವುದರೊಂದಿಗೆ ಜೀವನ ದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಮೈಸೂರಿನ ಮಹಾರಾಣಿ ಕಲಾ ಕಾಲೇಜಿನ ಡಾ. ಬಿ.ವಿ.ವಸಂತಕುಮಾರ್ ಮಾತನಾಡುತ್ತಾ, ಮಕ್ಕಳಿಗೆ ದೇಶಪ್ರೇಮ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ಎಸ್‍ಎಸ್ ಎಲ್‍ಸಿಯಲ್ಲಿ 600ಕ್ಕೂ ಹೆಚ್ಚು ಅಂಕಗಳನ್ನು ಪಡೆದ 92 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ಚರ್ಚಾಸ್ಪರ್ಧೆ, ವಿಜೇ ತರಿಗೆ ಪಾರಿತೋಷಕವನ್ನು ವಿತರಿಸಲಾಯಿತು. ದಿನೇಶ್ ಕೋಚಿಂಗ್ ಸೆಂಟರ್‍ನ ಎನ್.ವಿ.ದಿನೇಶ್ ಉಪಸ್ಥಿತರಿದ್ದರು.

Translate »