ವಿರಾಜಪೇಟೆ: ವಾಹನ ಚಾಲನೆ ಮಾಡುವಾಗ ಚಾಲಕರು ಕಾನೂನು ಪಾಲಿ ಸುವಂತಾಗಬೇಕು. ಆಗ ಮಾತ್ರ ದುರ್ಘಟನೆ ಗಳು ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್, ವಿರಾಜ ಪೇಟೆ ಉಪ ವಿಭಾಗದ ವತಿಯಿಂದ ‘ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಮಾಸ’ 2018ರ ಅಂಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾ ರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಅವರು ವಿದ್ಯಾ ರ್ಥಿಗಳನ್ನುದ್ದೇಶಿಸಿ, ಮನುಷ್ಯ ಹುಟ್ಟುವಾಗೇ ಕಾನೂನು ಪ್ರಾರಂಭಗೊಳ್ಳುತ್ತದೆ…