ಸಂಚಾರ ನಿರ್ವಹಣೆ, ರಸ್ತೆ ಸುರಕ್ಷಾ ಮಾಸಾಚರಣೆ
ಕೊಡಗು

ಸಂಚಾರ ನಿರ್ವಹಣೆ, ರಸ್ತೆ ಸುರಕ್ಷಾ ಮಾಸಾಚರಣೆ

July 6, 2018

ವಿರಾಜಪೇಟೆ: ವಾಹನ ಚಾಲನೆ ಮಾಡುವಾಗ ಚಾಲಕರು ಕಾನೂನು ಪಾಲಿ ಸುವಂತಾಗಬೇಕು. ಆಗ ಮಾತ್ರ ದುರ್ಘಟನೆ ಗಳು ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್ ಹೇಳಿದರು.

ಕೊಡಗು ಜಿಲ್ಲಾ ಪೊಲೀಸ್, ವಿರಾಜ ಪೇಟೆ ಉಪ ವಿಭಾಗದ ವತಿಯಿಂದ ‘ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಮಾಸ’ 2018ರ ಅಂಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾ ರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಅವರು ವಿದ್ಯಾ ರ್ಥಿಗಳನ್ನುದ್ದೇಶಿಸಿ, ಮನುಷ್ಯ ಹುಟ್ಟುವಾಗೇ ಕಾನೂನು ಪ್ರಾರಂಭಗೊಳ್ಳುತ್ತದೆ ನಂತರ ದಿನಚರಿಯ ಎಲ್ಲಾ ಕೆಲಸಗಳಲ್ಲಿಯು ಕಾನೂನು ಅಗತ್ಯವಾಗಿರುವುದರಿಂದ ಪ್ರತಿಯೊಬ್ಬರು ಕಾನೂನು ಪಾಲಿಸಲೆಬೇಕಾಗಿದೆ. ಅತೀ ವೇಗದ ವಾಹನ ಚಾಲನೆಯಲ್ಲಿ 18 ರಿಂದ 21 ವಯಸ್ಸಿನ ಯುವಕರು ಕೈ, ಕಾಲು, ಮುರಿ ದುಕೊಳ್ಳುವ ದುರ್ಘಟನೆಗಳು ಹೆಚ್ಚು ನಡೆ ಯುತ್ತಿರುವುದರಿಂದ ಪೋಷಕರುಗಳು ನ್ಯಾಯಾಲಯದಲ್ಲಿ ಬಂದು ನಿಲ್ಲುವಂತಹ ಪ್ರಸಂಗ ಹೆಚ್ಚಾಗಿದೆ. ಆದ್ದರಿಂದ ವಿದ್ಯಾ ರ್ಥಿಗಳು ಕಾನೂನಿನ ಅರಿವು ಪಡೆದು ಕೊಂಡು ತಮ್ಮ ಗುರಿಯನ್ನು ಸಾಧಿಸು ವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈ ಎಸ್‍ಪಿ ನಾಗಪ್ಪ ಮಾತನಾಡಿ, ಎಲ್ಲಾ ದೇಶ ಗಳನ್ನು ಹೋಲಿಸಿದರೆ ಭಾರತದಲ್ಲಿ ಒಂದು ವರ್ಷಕ್ಕೆ 1 ಲಕ್ಷ 40 ಸಾವಿರ ಮಂದಿ ಅಪ ಘಾತದಲ್ಲಿ ಕೈ, ಕಾಲು ಕಳೆದುಕೊಳ್ಳುತ್ತಿ ದ್ದಾರೆ. ಅದರಲ್ಲಿ ಪ್ರತಿದಿನ 380 ಮಂದಿ ವಾಹನ ಚಾಲಕರು ದುರ್ಘಟನೆಯಲ್ಲಿ ಮೃತಪಡುತ್ತಿದ್ದಾರೆ. ಅದರಿಂದ ಪ್ರತಿಯೊಬ್ಬರು ರಸ್ತೆ ನಿಯಮವನ್ನು ಪಾಲಿಸಬೇಕು ಎಂದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವವಸ್ಥಾ ಪಕ ಮದುಲೈಮುತ್ತು, ಸರ್ಕಲ್ ಇನ್ಸ್‍ಪೆ ಕ್ಟರ್ ಎನ್.ಕುಮಾರ್ ಆರಾಧ್ಯ ಹಾಗೂ ಗೋಣಿಕೊಪ್ಪ ಸಿ.ಐ.ಹರಿಶ್ಚಂದ್ರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ವಿರಾಜ ಪೇಟೆ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಇತರರು ಉಪಸ್ಥಿತರಿದ್ದರು.

ಪೊನ್ನಂಪೇಟೆ ಸಬ್‍ಇನ್ಸ್‍ಪ್ಯೆಕ್ಟರ್ ಮಹೇಶ್ ಸ್ವಾಗತಿಸಿ ನಿರೂಪಿಸಿದರು. ಪೊಲೀಸ್ ಇಲಾಖೆ ವತಿಯಿಂದ ಸಂಚಾರ ನಿರ್ವ ಹಣೆ ಬಗ್ಗೆ ಕಾಲೇಜ್ ವಿದ್ಯಾರ್ಥಿಗಳಿಗೆ ಸಾಕ್ಷಚಿತ್ರ ತೋರಿಸಿದರು.

Translate »