ಅನಾರೋಗ್ಯದಿಂದ ಕಾಡಾನೆ ಸಾವು
ಕೊಡಗು

ಅನಾರೋಗ್ಯದಿಂದ ಕಾಡಾನೆ ಸಾವು

July 6, 2018

ಸಿದ್ದಾಪುರ: ಅನಾರೋಗ್ಯದಿಂದ ಬಳಲು ತ್ತಿದ್ದ 15 ವರ್ಷದ ಹೆಣ್ಣಾನೆಯೊಂದು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಪಳ್ಳಕೇರೆಯ ಕಾಫಿ ತೋಟದಲ್ಲಿ ನಡೆದಿದೆ.

ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯಕ್ಕೊಳ ಗಾಗಿದ್ದ ಕಾಡಾನೆ ತೋಟದ ಕೆರೆಯ ನೀರಿನಲ್ಲಿದ್ದು ಮೇಲೆ ಬರಲು ಸಾಧ್ಯವಾಗದೆ ನಿಯಂತ್ರಣ ಕಳೆದು ಕೊಂಡಿತ್ತು. ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹಗ್ಗದ ಮೂಲಕ ಕಾಡಾನೆಯನ್ನು ಮೇಲೆತ್ತಿ ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಮೃತ ಪಟ್ಟಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಹಿಣಿ ತಿಳಿಸಿದ್ದಾರೆ.

ಡಾ.ಸುನೀಲ್ ಕಾಡಾನೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳಕ್ಕೆ ಡಿಎಫ್‍ಓ ಮರೀಯ ಕ್ರಿಸ್ತರಾಜ್, ವಲಯ ಅರಣ್ಯಾಧಿಕಾರಿ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಆರ್‍ಆರ್‍ಟಿ ತಂಡದವರು ಇದ್ದರು.

Translate »