ಮಗುಚಿದ ಸರ್ಕಾರಿ ಬಸ್: ಅಪಾಯದಿಂದ ಪ್ರಯಾಣಿಕರು ಪಾರು
ಕೊಡಗು

ಮಗುಚಿದ ಸರ್ಕಾರಿ ಬಸ್: ಅಪಾಯದಿಂದ ಪ್ರಯಾಣಿಕರು ಪಾರು

July 6, 2018

ಗೋಣಿಕೊಪ್ಪಲು:  ಗೋಣಿಕೊಪ್ಪಲು-ಪೊನ್ನಂಪೇಟೆ-ಬಾಳೆಲೆ ಮಾರ್ಗವಾಗಿ ಸಂಜೆ 4 ಗಂಟೆಗೆ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಪೊನ್ನಂಪೇಟೆ-ಕಿರುಗೂರು ರಸ್ತೆಯ ಮತ್ತೂರು ಬಳಿ ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ.

ಬಸ್‍ನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ರಸ್ತೆಯ ಎಡ ಭಾಗದ ಚರಂಡಿಗೆ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಾಲಕನ ಬಳಿ ಇರುವ ಬಾಗಿಲಿನ ಮೂಲಕ ಒಬ್ಬಬ್ಬರಾಗಿ ಹೊರ ಬಂದರು.

Translate »