ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ ಮತ್ತು ದೊಡ್ಡಮ್ಮ ದೇವರ 101ನೇ ವರ್ಷದ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥವನ್ನು ಶೃಂಗರಿಸಿ ಗ್ರಾಮದ ಮಹಿಳೆ ಯರು ತಮ್ಮ ತಮ್ಮ ಮನೆಯನ್ನು ಶೃಂಗಾರ ಮಾಡಿದ್ದರು. ಮದುವೆಯಾಗಿ ಹೋಗಿದ್ದ ಹೆಣ್ಣು ಮಕ್ಕಳು ಮತ್ತು ಬಂಧು-ಬಳಗ ಊರಿಗೆ ಬಂದು ದೇವರನ್ನು ಸ್ಮರಿಸುವ ಒಂದು ವಿಶೇಷ ವಾಡಿಕೆಯಾಗಿದೆ. ಇಲ್ಲಿ ದೊಡ್ಡಮ್ಮತಾಯಿ ದೇವರು ಗ್ರಾಮದ ವೀರಶೈವ ಲಿಂಗಾಯಿತರ ಪೂಜಿತ ದೇವರಾದರೆ, ಚಿಕ್ಕಮ್ಮ ದೇವರು ದಲಿತರ ಪೂಜಿತ ದೇವರಾಗಿದ್ದು,…