ಚಾಮರಾಜನಗರ: ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಅದನ್ನು ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲೈನ್‍ಮನ್ ಆನಂದ ರಾಜು ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಅವರು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಲ್ಲೂರು ಗ್ರಾಮದ ಪರಶಿವ ಮೂರ್ತಿ ಮತ್ತು ಶಿವಣ್ಣ ಎಂಬು ವರು ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು ಎನ್ನಲಾಗಿದೆ. ಇದನ್ನು ತಿಳಿದ ಗ್ರಾಮದ ಲೈನ್‍ಮನ್ ಆಗಿರುವ ಆನಂದರಾಜು ಅವರ ಮನೆಗಳಿಗೆ…