Tag: Literature

ಟೂಲ್ಸ್ ಹಿಡಿದ ಕೈಯಲ್ಲರಳುತ್ತಿದೆ ಸಾಹಿತ್ಯ!
ಮೈಸೂರು

ಟೂಲ್ಸ್ ಹಿಡಿದ ಕೈಯಲ್ಲರಳುತ್ತಿದೆ ಸಾಹಿತ್ಯ!

July 2, 2018

ಮೈಸೂರು:  ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಜೊತೆಯಲ್ಲಿದ್ದವರ ಪ್ರೋತ್ಸಾಹ, ಸೂಕ್ತ ವೇದಿಕೆ ದೊರಕಿದರೆ ಪ್ರತಿಭೆ ಅನಾವರಣಗೊಂಡು, ಜೀವನಕ್ಕೊಂದು ವಿಶೇಷತೆ ಪ್ರಾಪ್ತವಾಗುತ್ತದೆ ಎಂಬುದಕ್ಕೆ ಕೆಎಸ್‍ಆರ್‍ಟಿಸಿ ಮೈಸೂರು ವಿಭಾಗೀಯ ಗ್ರಾಮಾಂತರ ವಿಭಾಗದ ಕಾರ್ಯಾಗಾರದ ಮೆಕ್ಯಾನಿಕ್ ಜೆ.ನರಸಿಂಗರಾವ್, ಸಾಕ್ಷಿಯಾಗಿದ್ದಾರೆ. ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿರುವ ನರಸಿಂಗರಾವ್ ಅವರು, 26 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದುರಸ್ತಿಗೆ ಬಂದ ಬಸ್‍ಗಳನ್ನು ರಿಪೇರಿ ಮಾಡುವುದರೊಂದಿಗೆ ಸಾಹಿತ್ಯವನ್ನು ಆರಾಧಿಸುತ್ತಿದ್ದಾರೆ. ಓದುವ ಹವ್ಯಾಸವಿರುವ ಇವರು, ಕೆಲ ವರ್ಷಗಳಿಂದ ತೋಚಿದ್ದನ್ನು ಗೀಚುತ್ತಾ, ಇದೀಗ ನೂರಾರು ಸುಂದರ…

Translate »