ಮೈಸೂರು: ಮೈಸೂರಿನ ವಿನಾಯಕನಗರ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರು, ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನೂತನ ಕಟ್ಟಡದಲ್ಲಿ ತರಗತಿಗಳು ಆರಂಭವಾದ ದಿನದಿಂದಲೂ ಎದುರಿಸುತ್ತಿರುವ ತೊಂದರೆಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಗ್ರಾಮೀಣ ಭಾಗದಿಂದ ಬರುವ ನೂರಾರು ವಿದ್ಯಾರ್ಥಿನಿಯರ ಹೆಣಗಾಟ ಹೇಳತೀರದು. ವಿದ್ಯಾರ್ಥಿನಿಯರು ಹಾಗೂ ಕಾಲೇಜು ಪ್ರಾದ್ಯಾಪಕರ ಒತ್ತಾಯದಿಂದಾಗಿ ಮೈಸೂರು-ಬಿಳಿಕೆರೆ ಮಾರ್ಗದ ಬಸ್ಸುಗಳಿಗೆ ನಿಲುಗಡೆ ನೀಡಲಾಗುತ್ತಿದೆ. ಇದರ ಹೊರತು ಬೇರ್ಯಾವ ಮಾರ್ಗದಿಂದಲೂ ಕಾಲೇಜು ಸಂಪರ್ಕಕ್ಕೆ ಬಸ್ ಸೌಲಭ್ಯವಿಲ್ಲ. ಒಂದೆರಡು ಕಿಮೀ…