ಮಡಿಕೇರಿ: ಬಾಯ್ಬಿರಿದು ನಿಂತಿರುವ ಬೆಟ್ಟಗಳು.. ಕುಸಿದು ಬಿದ್ದ ಬೃಹತ್ ಬಂಡೆಗಳು.. ರಸ್ತೆಗಳು ಇತ್ತೆಂಬುದಕ್ಕೆ ಸಾಕ್ಷಿಯನ್ನೇ ಉಳಿಸದ ಮಣ್ಣಿನ ರಾಶಿ. ಕಾಫಿ ತೋಟಗಳಿಂದ ಛಿದ್ರಗೊಂಡು ಹಾರಿ ಹರಡಿಕೊಂಡಿರುವ ಕಾಫಿ ಗಿಡಗಳು. ಎಲ್ಲಿ ನೋಡಿದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಗಳ ಅವಶೇಷಗಳು. ಇದು ಮ್ಕಕಂದೂರು ವ್ಯಾಪ್ತಿಯಲ್ಲಿ ಕಂಡು ಬರುವ ಕರಾಳ ಚಿತ್ರಣ.. ಕಾಫಿ ತೋಟಗಳು, ಗದ್ದೆ ಬಯಲುಗಳ ನಡುವೆ ನೆಲೆ ನಿಂತಿದ್ದ ಮಕ್ಕಂದೂರು ಗ್ರಾಮ ವರುಣನ ಮುನಿಸಿಗೆ ಸಂಪೂರ್ಣ ಧ್ವಂಸಗೊಂಡಿದೆ. ಮಡಿಕೇರಿಯಿಂದ ಮಕ್ಕಂ ದೂರು ಜಂಕ್ಷನ್‍ಗೆ ತೆರಳಿ ಅಲ್ಲಿಂದ ತಂತಿ ಪಾಲದ…