ಮೈಸೂರು : ರಂಗಭೂಮಿಯಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿಕೊಂಡು ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾರ್ಜುನ ಶಾಸ್ತ್ರಿ ಹೇಳಿದರು. ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆ ವತಿಯಿಂದ ನಡೆದ ‘ಡಾ. ಸುಭದ್ರಮ್ಮ ಮನ್ಸೂರು ರಂಗಯಾನ’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟಿಸುತ್ತಾ ಹಾಡುಗಾರ್ತಿಯಾಗಿ ಬೆಳೆದ ಸುಭದ್ರಮ್ಮ ನವರ ಪರಿಚಯ ಸಮುದ್ರದ ಪರಿಚಯವಾದಂತೆ. ಸಂಗೀತ ಎಂಬುದು ಅವರ ಹುಟ್ಟಿನಿಂದ ಬಂದಿದ್ದು, ಸುಭದ್ರಮ್ಮರ ಆಗಮನ…