ಮೈಸೂರು: ರಾಜ್ಯ ದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣ ಹಿಡಿಯಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗುತ್ತಾರೆ. ಇದರಲ್ಲಿ ಯಾವುದೇ ಅನುಮಾನಬೇಡ ಎಂದು ದೆಹಲಿ ಲೋಕ ಸಭಾ ಸದಸ್ಯೆಯೂ ಆದ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರರಾದ ಮೀನಾಕ್ಷಿ ಲೇಖಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕಾಂಗ್ರೆಸ್ ಮೊದಲಿ ನಿಂದಲೂ ಜಾತಿ-ಧರ್ಮಗಳನ್ನು ಒಡೆ ಯುವ ನೀತಿಯನ್ನೇ ಕರಗತ ಮಾಡಿ ಕೊಂಡು ಬಂದಿದ್ದು, ಈ ಮೂಲಕ ರಾಜ ಕೀಯ ಲಾಭ ಪಡೆಯಲು…