ಅನುಮಾನವೇ ಬೇಡ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರೆ ಮೀನಾಕ್ಷಿ ಲೇಖಿ ವಿಶ್ವಾಸ
ಮೈಸೂರು

ಅನುಮಾನವೇ ಬೇಡ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರೆ ಮೀನಾಕ್ಷಿ ಲೇಖಿ ವಿಶ್ವಾಸ

April 26, 2018

ಮೈಸೂರು:  ರಾಜ್ಯ ದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣ ಹಿಡಿಯಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗುತ್ತಾರೆ. ಇದರಲ್ಲಿ ಯಾವುದೇ ಅನುಮಾನಬೇಡ ಎಂದು ದೆಹಲಿ ಲೋಕ ಸಭಾ ಸದಸ್ಯೆಯೂ ಆದ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರರಾದ ಮೀನಾಕ್ಷಿ ಲೇಖಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕಾಂಗ್ರೆಸ್ ಮೊದಲಿ ನಿಂದಲೂ ಜಾತಿ-ಧರ್ಮಗಳನ್ನು ಒಡೆ ಯುವ ನೀತಿಯನ್ನೇ ಕರಗತ ಮಾಡಿ ಕೊಂಡು ಬಂದಿದ್ದು, ಈ ಮೂಲಕ ರಾಜ ಕೀಯ ಲಾಭ ಪಡೆಯಲು ಹೊರಟಿದೆ. ಇದರಿಂದ ಜನರು ಬೇಸತ್ತು ಬದಲಾವಣೆ ಯನ್ನು ಬಯಸಿದ್ದಾರೆ. ಹಾಗಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದರು.

ಬಿ.ಎಸ್.ಯಡಿಯೂರಪ್ಪನವರೇ ಮುಖ್ಯ ಮಂತ್ರಿಯಾಗುತ್ತಾರಾ? ಎಂಬ ಪ್ರಶ್ನೆಗೆ ಮೀನಾಕ್ಷಿ ಲೇಖಿ ಅವರು ಪ್ರತಿಕ್ರಿಯಿಸಿ, ಯಾಕೆ ಅನುಮಾನನ?. ಬಿಎಸ್.ಯಡಿ ಯೂರಪ್ಪ ಅವರು ಮೊದಲಿನಿಂದಲೂ ನಮ್ಮೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ ದ್ದಾರೆ. ಅವರೊಬ್ಬ ಹಿರಿಯ ಮುತ್ಸದ್ದಿ. ಹಾಗಾಗಿ ಅವರೇ ಮುಂದಿನ ಮುಖ್ಯ ಮಂತ್ರಿ. ಇದರಲ್ಲಿ ಯಾವುದೇ ಅನು ಮಾನ ಬೇಡ ಎಂದು ಹೇಳಿದರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅಧಿಕಾರದ ಚಿಕ್ಕಾಣ ಹಿಡಿದಿದ್ದ ಬಿಜೆಪಿ, ಕಳೆದ ಚುನಾ ವಣೆಯಲ್ಲಿ ಸೋಲನನುಭವಿಸಿದೆ. ಆದರೆ, ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಅಮಿತ್ ಶಾ ಅವರು ಆಗುವ ಕೆಲಸಕ್ಕಿಂತ ಆಗದ ಕೆಲಸವನ್ನು ಆಗಿಸುವಂತೆ ಮಾಡುತ್ತಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವರುಣಾ ಕ್ಷೇತ್ರದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದಕ್ಕೆ ಪ್ರತಿ ಕ್ರಿಯಿಸಿ, ಎಲ್ಲಕ್ಕಿಂತ ಮೊದಲು ನಾವು ಬಿಜೆಪಿ ಕಾರ್ಯಕರ್ತರು. ಪಕ್ಷದಲ್ಲಿ ಕೆಲವು ನೀತಿಗಳಿದ್ದು, ಪಕ್ಷ ಹೇಳಿದಂತೆ ಕೇಳ ಬೇಕು. ಯಾರಿಗೆ ಟಿಕೆಟ್ ನೀಡುತ್ತದೋ ಅವರ ಗೆಲುವಿಗೆ ಶ್ರಮಿಸಬೇಕು. ಅದು ನಮ್ಮ ಕರ್ತವ್ಯ. ಅದೇ ಬಿಜೆಪಿ ಸಿದ್ದಾಂತ ಎಂದು ಅವರು ಹೇಳಿದರು.

Translate »