ಬೆಟ್ಟದಪುರ: ಅಮೇರಿಕಾದ ಕನ್ನಡಿಗರ ಪಂಪಾ ಕನ್ನಡ ಕೂಟ ಕರ್ನಾಟಕದ ಸಾಹಿತ್ಯ ಹಾಗೂ ಗ್ರಾಮೀಣ ಕ್ರೀಡೆಗಳನ್ನು, ಗ್ರಾಮೀಣ ಆಹಾರ ಖಾದ್ಯಗಳಾದ ರೊಟ್ಟಿ, ಟೊಮೇಟೋ ಬಾತ್, ರಾಗಿಮುದ್ದೆ ಸೇರಿದಂತೆ ಹಲ ವಾರು ಬಗೆಯ ಕರ್ನಾಟಕದ ಆಹಾರ ಗಳನ್ನು ತಯಾರಿಸಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಅಲ್ಲದೆ, ಗ್ರಾಮೀಣ ಕ್ರೀಡೆಗಳಾದ ಹಗ್ಗಜಗಾಟ, ಚೀಲದ ಓಟ, ಚೌಕಾಬಾರ, ರಂಗೋಲಿ ಸ್ಪರ್ಧೆ ಏರ್ಪಡಿಸಿ ಕನ್ನಡ ಗ್ರಾಮೀಣ ಸೊಗಡನ್ನು ಮೆರೆದಿದ್ದಾರೆ. ಅಮೇರಿಕಾದ ಮಿಚಿಗನ್ ಸ್ಟೇಟ್‍ನಲ್ಲಿ ಬರುವ ಫೈರ್‍ಫೈಟರ್ಸ್ ಪಾರ್ಕ್ ಟ್ರಾಯ್ ನಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ….