ಬೆಟ್ಟದಪುರ: ಅಮೇರಿಕಾದ ಕನ್ನಡಿಗರ ಪಂಪಾ ಕನ್ನಡ ಕೂಟ ಕರ್ನಾಟಕದ ಸಾಹಿತ್ಯ ಹಾಗೂ ಗ್ರಾಮೀಣ ಕ್ರೀಡೆಗಳನ್ನು, ಗ್ರಾಮೀಣ ಆಹಾರ ಖಾದ್ಯಗಳಾದ ರೊಟ್ಟಿ, ಟೊಮೇಟೋ ಬಾತ್, ರಾಗಿಮುದ್ದೆ ಸೇರಿದಂತೆ ಹಲ ವಾರು ಬಗೆಯ ಕರ್ನಾಟಕದ ಆಹಾರ ಗಳನ್ನು ತಯಾರಿಸಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಅಲ್ಲದೆ, ಗ್ರಾಮೀಣ ಕ್ರೀಡೆಗಳಾದ ಹಗ್ಗಜಗಾಟ, ಚೀಲದ ಓಟ, ಚೌಕಾಬಾರ, ರಂಗೋಲಿ ಸ್ಪರ್ಧೆ ಏರ್ಪಡಿಸಿ ಕನ್ನಡ ಗ್ರಾಮೀಣ ಸೊಗಡನ್ನು ಮೆರೆದಿದ್ದಾರೆ.
ಅಮೇರಿಕಾದ ಮಿಚಿಗನ್ ಸ್ಟೇಟ್‍ನಲ್ಲಿ ಬರುವ ಫೈರ್‍ಫೈಟರ್ಸ್ ಪಾರ್ಕ್ ಟ್ರಾಯ್ ನಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದರಲ್ಲಿಯೂ ದಕ್ಷಿಣ ಕರ್ನಾಟಕದ ಚಿಕ್ಕಮಗಳೂರು, ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ಹಲವಾರು ಜಿಲ್ಲೆಗಳ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಈ ನಗರ ಕಾರು ತಯಾರಿಕೆಗೆ ಪ್ರಸಿದ್ಧವಾಗಿದೆ. ಇಲ್ಲಿ ಸಾವಿರಾರು ಕನ್ನಡಿಗರು ಉದ್ಯೋಗಕ್ಕಾಗಿ ಈ ನಗರವನ್ನು ಅವಲಂಬಿಸಿದ್ದಾರೆ. ಆದ್ದರಿಂದ ಅಲ್ಲಿರುವ ಜನತೆಗೆ ಒಂದು ಸಂತೋಷಕೂಟ ಮಾಡುವ ಉದ್ದೇಶದಿಂದ ಪ್ರತಿ ಭಾನುವಾರ ಎಲ್ಲರೂ ಒಂದೆಡೆ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸತ್ತಿರುತ್ತಾರೆ. ಅಲ್ಲದೇ ಈ ಕಾರ್ಯಕ್ರಮದ ಪ್ರಮುಖ ರೂವಾರಿ ಯಾದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ವಾಸಿಯಾದ ನಿವೃತ್ತ ಶಿಕ್ಷಕ ಬಿ.ಟಿ.ಸಣ್ಣಸ್ವಾಮಿ ಮತ್ತು ವೈ.ಪಿ.ರತ್ನಮ್ಮ ಇವರ ಏಕೈಕ ಪುತ್ರ ಕುಲದೀಪ್ ಕೆಲ ದಿನಗಳ ಹಿಂದೆ ಅಮೇರಿಕಕ್ಕೆ ಉದ್ಯೋಗವನ್ನರಸಿ ಹೋದರು. ಅಲ್ಲಿನ ಕನ್ನಡಿಗರೆಲ್ಲ ಸೇರಿ ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ವಿವೇಕ್, ಅಶೋಕ್, ಆದರ್ಶ್, ರಾಮ್, ಗಣೇಶ್, ರವಿ, ಪ್ರಸನ್ನ, ಅಶ್ವಿನಿ, ಪ್ರಿಯಾಂಕ, ಶ್ರೀಧರ್, ರವೀಶ್, ಜ್ಯೋತಿ, ಮಂಜುಳಾ ಸೇರಿದಂತೆ 200 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿ ಈ ಕನ್ನಡದ ಕಂಪನ್ನು ಅಮೇರಿಕಾ ದಲ್ಲಿಯೂ ಪಸರಿಸುವಂತೆ ಮಾಡಿದ್ದಾರೆ.