ಮೈಸೂರು

ಜೋ ಬಿಡೆನ್ ಅಮೆರಿಕ ನೂತನ ಅಧ್ಯಕ್ಷ

November 8, 2020

ವಾಷಿಂಗ್ಟನ್, ನ.7- ವಿಶ್ವಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯ ಕ್ಷೀಯ ಚುನಾವಣೆಯ ಸ್ಪಷ್ಟ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿ ಕ್ಕಿದ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಅವರು ಭರ್ಜರಿ ಜಯ ದಾಖಲಿಸಿ ದ್ದಾರೆ. ಆ ಮೂಲಕ ಮುಂದಿನ ಯುಎಸ್ ಅಧ್ಯಕ್ಷರಾಗಿ ಚುನಾಯಿತರಾಗಿ ದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿದ್ದಾರೆ.

`ಸ್ವಿಂಗ್ ಸ್ಟೇಟ್ಸ್’ ಎಂದೇ ಗುರುತಿಸ ಲಾಗಿರುವ ರಾಜ್ಯಗಳಲ್ಲಿ ಪ್ರಮುಖವಾದ ಪೆನ್ಸಿಲ್ವೇನಿಯಾದಲ್ಲಿ ಬಿಡೆನ್ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಅಮೆರಿಕ ಟಿವಿ ಮಾಧ್ಯಮಗಳಲ್ಲಿ ಮುಂದಿನ ಅಧ್ಯಕ್ಷ ಬಿಡೆನ್ ಎಂದು ಬಿತ್ತರಿಸಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದ (ಯುಎಸ್‍ಎ) 46ನೇ ಅಧ್ಯಕ್ಷ ರಾಗಿ ಬಿಡೆನ್ ಹೊರಹೊಮ್ಮಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ಒಟ್ಟು 538 ಮತಗಳ ಪೈಕಿ ಅಧ್ಯಕ್ಷಗಾದಿಗೇರಲು ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯವಿದೆ. ಜೋ ಬಿಡೆನ್ 290 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದ್ದರೆ, ಹಾಲಿ ಅಧ್ಯಕ್ಷ ಟ್ರಂಪ್ ಅವರಿಗೆ ಕೇವಲ 214 ಮತಗಳನ್ನು ಪಡೆಯಲು ಸಾಧ್ಯವಾಗಿದೆ.

77 ವರ್ಷದ ಬಿಡೆನ್ ಶ್ವೇತಭವನಕ್ಕೆ ಆಯ್ಕೆಯಾದ ಅತ್ಯಂತ ಹಿರಿಯ ಅಭ್ಯರ್ಥಿ ಎಂಬ ಖ್ಯಾತಿ ಪಡೆದಿದ್ದಾರೆ. 74 ವರ್ಷದ ಟ್ರಂಪ್ ಚುನಾವಣೆಯಲ್ಲಿ ಸೋಲಿನ ಸುಳಿವು ಸಿಕ್ಕ ಬಳಿಕ ಹತಾಶೆಗೊಳಗಾದರು. ಚುನಾವಣೆ ಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಟ್ರಂಪ್ ಕನಸು ಭಗ್ನ: 2ನೇ ಬಾರಿ ಅಧ್ಯಕ್ಷ ಪದವಿ ಅಲಂಕರಿಸುವ ಡೊನಾಲ್ಡ್ ಟ್ರಂಪ್ ಕನಸು ಕಡೆಗೂ ಭಗ್ನಗೊಂಡಿದೆ. 270 ಮ್ಯಾಜಿಕ್ ನಂಬರ್‍ಗಿಂತ 20 ಮತಗಳನ್ನು ಹೆಚ್ಚುವರಿಯಾಗಿ ಪಡೆಯುವ ಮೂಲಕ

ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ದಾಖಲಾರ್ಹ ಜಯ ಪಡೆದಿದ್ದಾರೆ. ಆದರೆ, ಟಂಪ್ ಕೇವಲ 214 ಮತ ಗಳಿಸುವಷ್ಟರಲ್ಲೇ ಸುಸ್ತು ಹೊಡೆದಿದ್ದಾರೆ. ಜೋ ಬಿಡೆನ್ ಶೇ. 49.5ರಷ್ಟು ಮತ ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ ಶೇ.48.9ರಷ್ಟು ಮತ ಪಡೆದಿದ್ದಾರೆ.

ಕೆಲಸ ಆರಂಭಿಸಿದ ಬಿಡೆನ್!: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಗೆಲುವಿನ ದಡ ಸಮೀಪಿಸಿರುವ ಜೋ ಬಿಡೆನ್ ಅವರು ಜನವರಿ ನಂತರ ದೇಶದಲ್ಲಿ ಆಗಬೇಕಾದ ತುರ್ತು ಕೆಲಸಗಳು ಏನು ಎನ್ನುವ ಕುರಿತು ಶನಿವಾರದಿಂದಲೇ ಸಮಾಲೋಚನೆ ಶುರು ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸುನಾಮಿಯಿಂದ ಪೆಟ್ಟು ತಿಂದಿರುವ ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿ ಕತೆಗೆ ಕಾಯಕಲ್ಪ ನೀಡಲು ಭಾರೀ ಕಸರತ್ತಿಗೆ ಕೈ ಹಾಕಿದ್ದಾರೆ. ಕೊನೆ ಹಂತದ ಮತ ಸಮರದ ಫಲಿತಾಂಶ ಗಳ ಪ್ರಕಾರ, ಬಿಡೆನ್ ಅವರಿಗೆ 538ರಲ್ಲಿ 264 ಎಲೆಕ್ಟೋರಲ್ ಕಾಲೇಜ್ ಮತಗಳು ದಕ್ಕಿವೆ. ನಿಚ್ಚಳ ಗೆಲುವಿಗೆ ಇನ್ನೂ ಆರು ಮತಗಳ ಅಗತ್ಯ ಇದ್ದು, ಭಾನುವಾರದ ವೇಳೆಗೆ ಸ್ಪಷ್ಟಗೊಳ್ಳುವ ಸಾಧ್ಯತೆ ಇದೆ. “ಅಂತಿಮ ಫಲಿತಾಂಶಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಆದರೆ, ಗೆಲುವು ಖಚಿತಗೊಂಡಿದೆ. ಕೆಲಸ ಶುರು ಮಾಡಲು ಕಾಯಬೇಕಾದ ಅಗತ್ಯ ಇಲ್ಲ,” ಎಂದು ಬಿಡೆನ್ ಹೇಳಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ಅವರು ಉಪಾಧ್ಯಕ್ಷ ಸ್ಥಾನದ ತಮ್ಮ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ಬಳಿಕ ಆರೋಗ್ಯ ಮತ್ತು ಆರ್ಥಿಕತೆಯ ಬಿಕ್ಕಟ್ಟುಗಳ ಕುರಿತು ಬಿಡೆನ್ ಮತ್ತು ಕಮಲಾ ಹ್ಯಾರಿಸ್ ತಜ್ಞರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. “ಅಧಿಕಾರದ ಮೊದಲ ದಿನದಿಂದಲೇ ನಾವು ಮಾಡಬೇಕಾದ ಕೆಲಸ ನಿರ್ಧಾರವಾಗಿದೆ. ಕೊರೊನಾ ಸಾಂಕ್ರಾಮಿಕಕ್ಕೆ ತಡೆಹಾಕುವ ತುರ್ತಿದೆ. ಈ ಕೆಲಸವನ್ನು ನಾವು ಆದ್ಯತೆಯ ಮೇಲೆ ಮಾಡುತ್ತೇವೆ. ಈಗಾಗಲೇ ಮಡಿದ ಲಕ್ಷಾಂತರ ಜನರ ಜೀವ ಮರಳಿ ತರುವುದು ನಮ್ಮಿಂದ ಸಾಧ್ಯವಾಗದು. ಆದರೆ, ಬಲಿಯಾಗಬಹುದಾದ ಪ್ರಾಣಗಳ ರಕ್ಷಣೆ ನಮ್ಮಿಂದ ಸಾಧ್ಯವಿದೆ. ಆ ಕೆಲಸ ಮಾಡುತ್ತೇವೆ,” ಎಂದು ವಿಲ್ಲಿಂಗ್ಟನ್‍ನಲ್ಲಿ ರಾಷ್ಟ್ರ ಉದ್ದೇಶಿಸಿ ಬಿಡೆನ್ ಮಾತನಾಡಿದ್ದಾರೆ.

ಟ್ರೋಲ್ ಆದ ಟ್ರಂಪ್!: ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಅಧ್ಯಕ್ಷರಾಗುವುದು ಖಚಿತವಾಗುತ್ತಿದ್ದಂತೆ ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಸ್ಪರ್ಧಿ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸುತ್ತಿರುವ ಅಣಕು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಬಿಡೆನ್ ಬೆಂಬಲಿಗರು ಸೇರಿದಂತೆ ಅನೇಕರು ಅಧ್ಯಕ್ಷ ಟ್ರಂಪ್ ಅವರನ್ನು ಟ್ರಾಲ್ ಮಾಡುವ ಫೆÇೀಟೊ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿ ದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಶ್ವೇತಭವನದ ಹೊರಗೆ ಹಳದಿ ಬಣ್ಣದ ಟ್ರಕ್‍ವೊಂದು ನಿಂತಿರುವ ವಿಡಿಯೋವೊಂದು ಕೂಡ ಟ್ವಿಟರ್‍ನಲ್ಲಿ ಹರಿದಾಡಿದ್ದು, ಟ್ರಂಪ್ ಮತ್ತು ಅವರ ಕುಟುಂಬ ಶ್ವೇತಭವನವನ್ನು ಖಾಲಿ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಹಳದಿ ಬಣ್ಣದ ಟ್ರಕ್ ಪ್ರವೇಶದ್ವಾರದಲ್ಲಿ ನಿಂತಿರುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ‘’ಈ ವಿಡಿಯೋ ಹಳೆಯದೂ ಆಗಿರಬಹುದು. ಆದರೆ ಸದ್ಯದ ರಾಜಕೀಯ ಸನ್ನಿವೇಶಕ್ಕೆ ಬಳಕೆಯಾಗುತ್ತಿದೆ’’ ಎಂದು ಜಾಲತಾಣ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Translate »