ನಾಳೆ ಮೈಸೂರಿನಲ್ಲಿ ಜಲ್‍ಸಾ-ಇ-ಯಾದ್-ತಾಜುಲ್ ಷರಿಯಾ ಆಚರಣೆ
ಮೈಸೂರು

ನಾಳೆ ಮೈಸೂರಿನಲ್ಲಿ ಜಲ್‍ಸಾ-ಇ-ಯಾದ್-ತಾಜುಲ್ ಷರಿಯಾ ಆಚರಣೆ

August 3, 2018

ಮೈಸೂರು: ಇತ್ತೀಚೆಗೆ ನಿಧನರಾದ ಅಂತರರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸ ಹಾಗೂ ಉತ್ತರಪ್ರದೇಶ ಬರೇಲಿಯ ದಾರುಲ್-ಉಲ್-ಖಾಜಾ ಇಂಡಿಯಾದ ಪ್ರಧಾನ ಖಾಜಿ ಮೌಲಾನಾ ಮುಫ್ತಿ ಮೊಹಮ್ಮದ್ ಅಕ್ತರ್ ರಜಾಖಾನ್ ಅಜಾರಿ ಮಿಯಾನ್ ತಾಜುಲ್ ಷರಿಯಾ ಅವರ ಸ್ಮರಣೆ ಹಾಗೂ ಸಂತಾಪ ಸೂಚಕ ಸಭೆ ಅಂಗವಾಗಿ, ಮೈಸೂರಿನ ಲಷ್ಕರ್ ಮೊಹಲ್ಲಾ ಅಶೋಕ ರಸ್ತೆಯಲ್ಲಿರುವ ಆಜಮ್ ಮರ್ಕಾಜ್ ಅಹಲೆ ಸುನ್ನತೋ ಮಸೀದಿಯಲ್ಲಿ, ಇದೇ ಆಗಸ್ಟ್ 4, ರಾತ್ರಿ 8.30 ಗಂಟೆಗೆ ಜಲ್-ಇ-ಯಾದ್-ತಾಜುಲ್ ಷರಿಯಾ ಆಚರಿಸಲಾಗುವುದು. ಮೈಸೂರಿನ ಸರ್‍ಖಾಜಿಯವರಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೆಬ್‍ರವರು ಅಧ್ಯಕ್ಷತೆ ವಹಿಸಲಿದ್ದು, ಹಜರತ್ ಮೌಲಾನಾ ಮುಫ್ತಿ ಅನ್ವರ್ ಅಲಿ ಸಾಹೆಬ್ ಖಲೀಫಾ ಹುಜೂರ್-ಉಲ್-ತಾಜುಲ್ ಫಾರಿಯಾ ಅವರು ಮುಖ್ಯ ಭಾಷಣಕಾರರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮೊ.9448569987, 9902433084, 9980657510, ನಲ್ಲಿ ಸಂಪರ್ಕಿಸಬಹುದು.

Translate »