Tag: missing

ವ್ಯಕ್ತಿ ನಾಪತ್ತೆ
ಮೈಸೂರು

ವ್ಯಕ್ತಿ ನಾಪತ್ತೆ

July 1, 2018

ಮೈಸೂರು: ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿ ನಿವಾಸಿ ನಾರಾಯಣಪ್ಪ ಎಂಬುವರ ಪುತ್ರ ಗುರುಮೂರ್ತಿ (53) ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಜೂ. 28 ರಂದು ಸಂಜೆ 5ರ ಸಮದಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ವಾಪಸ್ ಬಂದಿಲ್ಲ ಎಂದು ಆತನ ತಂದೆ ದೂರು ದಾಖಲಿಸಿದ್ದಾರೆ. ಕನ್ನಡ ಮಾತನಾಡುತ್ತಾರೆ. ನೀಲಿ ಬಣ್ಣದ ಷರ್ಟು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಈತನ ಬಗ್ಗೆ ಮಾಹಿತಿ ತಿಳಿದಲ್ಲಿ ದೂ. 0821-2418321, 2418521 ಅನ್ನು ಸಂಪರ್ಕಿಸಬಹುದು.

ಯುವಕ, ವೃದ್ಧೆ ನಾಪತ್ತೆ: ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು
ಮೈಸೂರು

ಯುವಕ, ವೃದ್ಧೆ ನಾಪತ್ತೆ: ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು

June 29, 2018

ಮೈಸೂರು:  ಕಷ್ಟಪಟ್ಟು ಸಂಪಾದಿಸಿದ ಹಣವನ್ನು, ಬೇರೊಬ್ಬರಿಗೆ ಸಾಲವಾಗಿ ನೀಡಿದ್ದ ತಾಯಿಯೊಂದಿಗೆ ಜಗಳ ವಾಡಿದ ಯುವಕನೋರ್ವ ನಾಪತ್ತೆಯಾಗಿರುವ ಪ್ರಕರಣ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಕಡಕೊಳದ ನಿವಾಸಿ ಲಕ್ಷ್ಮೀ ಅವರ ಪುತ್ರ ಚೇತನ್ (22), ನಾಪತ್ತೆಯಾಗಿರುವ ಯುವಕನಾಗಿದ್ದು, ಈತ ಟಿವಿಎಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಲಕ್ಷ್ಮೀ ಅವರು ಪರಿಚಿತರಾದ ಶಂಕರ್ ಎಂಬುವರಿಗೆ ಸಾಲವಾಗಿ ಹಣ ನೀಡಿದ್ದರು. ಶಂಕರ್ ಪತ್ನಿ ಮಹಾದೇವಿ ಅವರು ಹಣವನ್ನು ವಾಪಸ್ಸು ನೀಡುವುದಾಗಿ ಜೂ.26ರಂದು ತಮ್ಮ ಮನೆಯ ಬಳಿಗೆ ಕರೆಸಿಕೊಂಡಿದ್ದರು. ಆಗ ಹಣದ…

ವ್ಯಕ್ತಿ ನಾಪತ್ತೆ
ಮೈಸೂರು

ವ್ಯಕ್ತಿ ನಾಪತ್ತೆ

June 28, 2018

ಮೈಸೂರು: ಮೈಸೂರಿನ ಸುಭಾಷ್ ನಗರದಲ್ಲಿ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲಿನ ಚಿಕ್ಕಲಿಂಗಯ್ಯ ಎಂಬುವವರ ಪುತ್ರ ಸೋಮಶೇಖರ್ (32) ಜೂ.21ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಮನೆಯಿಂದ ಹೊರ ಹೋದವರು ಈವರೆಗೆ ವಾಪಸ್ಸಾಗಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್.ಪೊಲೀಸರು ಈತನ ಬಗ್ಗೆ ಮಾಹಿತಿ ಇರುವವರು ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 0821-2418339 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

1 2
Translate »