ಯುವಕ, ವೃದ್ಧೆ ನಾಪತ್ತೆ: ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು
ಮೈಸೂರು

ಯುವಕ, ವೃದ್ಧೆ ನಾಪತ್ತೆ: ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು

June 29, 2018

ಮೈಸೂರು:  ಕಷ್ಟಪಟ್ಟು ಸಂಪಾದಿಸಿದ ಹಣವನ್ನು, ಬೇರೊಬ್ಬರಿಗೆ ಸಾಲವಾಗಿ ನೀಡಿದ್ದ ತಾಯಿಯೊಂದಿಗೆ ಜಗಳ ವಾಡಿದ ಯುವಕನೋರ್ವ ನಾಪತ್ತೆಯಾಗಿರುವ ಪ್ರಕರಣ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಲೂಕಿನ ಕಡಕೊಳದ ನಿವಾಸಿ ಲಕ್ಷ್ಮೀ ಅವರ ಪುತ್ರ ಚೇತನ್ (22), ನಾಪತ್ತೆಯಾಗಿರುವ ಯುವಕನಾಗಿದ್ದು, ಈತ ಟಿವಿಎಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಲಕ್ಷ್ಮೀ ಅವರು ಪರಿಚಿತರಾದ ಶಂಕರ್ ಎಂಬುವರಿಗೆ ಸಾಲವಾಗಿ ಹಣ ನೀಡಿದ್ದರು. ಶಂಕರ್ ಪತ್ನಿ ಮಹಾದೇವಿ ಅವರು ಹಣವನ್ನು ವಾಪಸ್ಸು ನೀಡುವುದಾಗಿ ಜೂ.26ರಂದು ತಮ್ಮ ಮನೆಯ ಬಳಿಗೆ ಕರೆಸಿಕೊಂಡಿದ್ದರು. ಆಗ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಬಗ್ಗೆ ಲಕ್ಷ್ಮೀ, ತನ್ನ ಮಗ ಚೇತನ್‍ಗೆ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಚೇತನ್, ತನ್ನ ತಾಯಿ ಲಕ್ಷ್ಮೀಯವರನ್ನು ಸಮಾ ಧಾನಪಡಿಸಿ, ಮನೆಗೆ ಕರೆದುಕೊಂಡು ಹೋಗಿ, ನಾವು ಕಷ್ಟಪಟ್ಟು ದುಡಿದ ಹಣವನ್ನು ಹೀಗೆ ಬೇರೆಯವರಿಗೆ ಏಕೆ ನೀಡಿದ್ದೆ? ಎಂದು ಪ್ರಶ್ನಿಸಿ, ಜಗಳವಾಡಿದ್ದಾನೆ. ನಂತರ ಮನೆಯಿಂದ ಹೊರಹೋದವನು ಈವರೆಗೂ ವಾಪಸ್ಸಾಗಿಲ್ಲ ಎಂದು ಆತನ ತಾಯಿ ಲಕ್ಷ್ಮೀ, ಪೊಲೀಸರಿಗೆ ದೂರು ನೀಡಿದ್ದಾರೆ.

ಚೇತನ್ ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿದ್ದ. ಆತನ ಎಡಗೈನಲ್ಲಿ ಹಳೆಯ ಗಾಯದ ಗುರುತಿದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಬಲ್ಲವನಾಗಿದ್ದಾನೆ.

ವೃದ್ಧೆ ನಾಪತ್ತೆ: ಸಂಬಂಧಿಕರ ವಿವಾಹಕ್ಕೆಂದು ಹೋದ ವೃದ್ಧೆ ಯೊಬ್ಬರು ನಾಪತ್ತೆಯಾಗಿರುವ ಘಟನೆ ಮೈಸೂರಿನ ಬಂಡೀ ಪಾಳ್ಯದಿಂದ ವರದಿಯಾಗಿದೆ. ಬಂಡೀಪಾಳ್ಯದ ನಿವಾಸಿ ಮಹ ದೇವು ಅವರ ಪತ್ನಿ ಜಯಮ್ಮ(65), ನಾಪತ್ತೆಯಾದವರು. ಇವರು ಸಂಬಂ ಧಿಕರೊಬ್ಬರ ವಿವಾಹ ಮಹೋತ್ಸವಕ್ಕೆ ತೆರಳುವು ದಾಗಿ ಜೂ.17 ರಂದು ಮನೆಯಿಂದ ಹೊರಹೋದವರು ಈವ ರೆಗೂ ವಾಪಸ್ಸಾ ಗಿಲ್ಲ. ಸಂಬಂಧಿಕರು, ಪರಿಚಿತರ ಮನೆಯಲ್ಲೆಲ್ಲಾ ವಿಚಾರಿಸಿದರೂ ಅವರು ಪತ್ತೆಯಾಗಿಲ್ಲ. ಮನೆಯಿಂದ ಹೋಗು ವಾಗ ಹಸಿರು ಸೀರೆ ಧರಿಸಿದ್ದರೆಂದು ಜಯಮ್ಮ ಅವರ ಪುತ್ರ ಮೈಸೂರು ದಕ್ಷಿಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕವರು ಮೈಸೂರು ದಕ್ಷಿಣ ಪೊಲೀಸ್ ಠಾಣೆ (ದೂ.ಸಂ: 0821-2444955) ಸಂಪರ್ಕಿಸುವಂತೆ ಕೋರಲಾಗಿದೆ.

Translate »