ಮೈಸೂರು: ಜಯಪುರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಗೃಹಿಣಿಯೋರ್ವರು ನಾಪತ್ತೆಯಾಗಿದ್ದಾರೆ. ಮೈಸೂರು ತಾಲೂಕಿನ ಮಾರ್ಗಳ್ಳಿಹುಂಡಿ ನಿವಾಸಿ ಸಿದ್ದರಾಮ ಅವರ ಪತ್ನಿ ಲಕ್ಷ್ಮಿ ನಾಪತ್ತೆಯಾದವರು. ಈ ಹಿಂದೆ ಗಂಡ ಹೆಂಡತಿ ಸಂಸಾ ರದ ವಿಚಾರದಲ್ಲಿ ಸಣ್ಣಪುಟ್ಟ ಜಗಳ ನಡೆದು ಎರಡು ಮನೆಯವರು ಬುದ್ಧಿವಾದ ಹೇಳಿ ಸರಿಪಡಿಸಿದ್ದರು. ಆದರೆ ಏ.30ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಲಕ್ಷ್ಮಿ ಗಂಡನ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದು, ಹೋಗುವಾಗ ಒಡವೆ ಮತ್ತು ಹಣ ತೆಗೆದುಕೊಂಡು ಹೋಗಿದ್ದಾಳೆ ಎಂದು ಆಕೆಯ ತಂದೆ ಮರಿದೊಡ್ಡೇಗೌಡ ದೂರು ದಾಖಲಿಸಿದ್ದಾರೆ. ಈಕೆಯ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ದೂ. 0821- 2444800, 0821-2595781, ಮೊ. 9480805047 ಸಂಪರ್ಕಿಸಲು ಕೋರಲಾಗಿದೆ.