ವಿದ್ಯಾರ್ಥಿ ನಾಪತ್ತೆ
ಮೈಸೂರು

ವಿದ್ಯಾರ್ಥಿ ನಾಪತ್ತೆ

August 11, 2019

ಮೈಸೂರು, ಆ.10-ಪ್ರೌಢಶಾಲಾ ವಿದ್ಯಾರ್ಥಿಯೋರ್ವ ನಾಪತ್ತೆ ಯಾದ ಬಗ್ಗೆ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ವಾಸವಿದ್ದು, ಬೃಂದಾವನ ಬಡಾ ವಣೆಯಲ್ಲಿರುವ ಕುವೆಂಪು ಸ್ಮಾರಕ ಶತಮಾನೋತ್ಸವ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಲ್.ಬಾಲಾಜಿ (15) ಜುಲೈ 31ರಂದು ಶಾಲೆಗೆ ತೆರಳುವುದಾಗಿ ಹೇಳಿ ಹೋದವನು ಈವರೆಗೆ ವಾಪಸ್ಸಾಗಿಲ್ಲ ಎಂದು ಮಕ್ಕಳ ಮನೆಯ ಕಾರ್ಯದರ್ಶಿ ವಿವಿ.ರಘೋತ್ತಮ ರಾವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈತನ ಬಗ್ಗೆ ಮಾಹಿತಿ ಇರುವವರು ವಿವಿ ಪುರಂ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ- 0821-2418314 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339 ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Translate »