ಸಾಲ ಯೋಜನೆ ಅನುಷ್ಠಾನದಲ್ಲಿ ನಿರಾಸಕ್ತಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ, ಶಾಸಕರ ಅಸಮಾಧಾನ
ಕೊಡಗು

ಸಾಲ ಯೋಜನೆ ಅನುಷ್ಠಾನದಲ್ಲಿ ನಿರಾಸಕ್ತಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ, ಶಾಸಕರ ಅಸಮಾಧಾನ

June 29, 2018

ಮಡಿಕೇರಿ:  ಕೇಂದ್ರ ಮತ್ತು ರಾಜ್ಯ ಸರಕಾರದ ಸಾಲದ ಯೋಜನೆಗಳ ಅನುಷ್ಠಾನದಲ್ಲಿ ನಿರಾಸಕ್ತಿ ತೋರುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಂಸದ ಪ್ರತಾಪಸಿಂಹ ಹಾಗೂ ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿ ಸಿದ ಅವರು ಅಸಡ್ಡೆ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳು ವಂತೆ ಸೂಚನೆ ನೀಡಿದ್ದಾರೆ.

ನಗರದ ಕಾರ್ಪೋರೇಷನ್ (ಲೀಡ್) ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕ್‍ಗಳ ಸಾಲ ವಿತರಣೆ ಮತ್ತು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನು ಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಜನಪ್ರತಿನಿಧಿಗಳು ಮಾತನಾಡಿದರು.
ವಿಶೇಷವಾಗಿ ಕೃಷಿ ಸಾಲ ನೀಡುವಲ್ಲಿ ಬ್ಯಾಂಕ್‍ಗಳು ಹಿನ್ನಡೆ ಸಾಧಿಸಿರುವ ಬಗ್ಗೆ ಸಂಸದ ಪ್ರತಾಪ್‍ಸಿಂಹ ಅವರು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ಮುದ್ರಾ, ಸ್ಟಾರ್ಟ್‍ಅಪ್, ಸ್ಟಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಾಲ ವಿತರಿಸಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸುತ್ತಿರುವ ಬಗ್ಗೆ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಗಮನ ಸೆಳೆದರು.

ಅದರಲ್ಲೂ ಕೆಲವು ಬ್ಯಾಂಕ್‍ಗಳು ಶೂನ್ಯ ಸಾಧನೆ ಮಾಡಿರುವುದನ್ನು ಬೊಟ್ಟು ಮಾಡಿ, ಅಂತಹ ಬ್ಯಾಂಕ್ ಅಧಿಕಾರಿ ಗಳನ್ನು ‘ಅಭಿನಂದಿಸುವಂತೆ’ ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಅಧಿಕಾರಿ ಗಳಿಗೆ ಸೂಚಿಸುವ ಮೂಲಕ ತಮ್ಮ ಅಸಮಾ ಧಾನ ವ್ಯಕ್ತಪಡಿಸಿದರು. ಪ್ರಾಮಾಣಿಕವಾಗಿ ಕೃಷಿ ಸಾಲ, ಬೆಳೆ ಸಾಲ ಮರುಪಾವತಿಸುತ್ತಿ ರುವ ಗ್ರಾಹಕರಿಗೂ ಬ್ಯಾಂಕ್ ಅಧಿಕಾರಿ ಗಳು ಸಾಲ ನೀಡಲು ಹಿಂದೇಟು ಹಾಕುತ್ತಿ ರುವ ಬಗ್ಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಗಮನಸೆಳೆದರಲ್ಲದೆ, ಶಾಸಕ ನಾಗಿರುವ ತನಗೇ ಬ್ಯಾಂಕ್ ಅಧಿಕಾರಿ ಗಳು ಸಮರ್ಪಕವಾಗಿ ಸ್ಪಂದಿಸದಿರುವಾಗ, ಇನ್ನು ಜನಸಾಮಾನ್ಯರಿಗೆ ಇವರು ಎಷ್ಟರಮಟ್ಟಿಗೆ ಸ್ಪಂದಿಸಬಹುದು ಎಂದು ಪ್ರಶ್ನಿಸಿದರು.

ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಂಸದ ಪ್ರತಾಪ್‍ಸಿಂಹ ಸಲಹೆ ನೀಡಿ ದರು. ಬಹುತೇಕ ಬ್ಯಾಂಕ್‍ಗಳಲ್ಲಿ ಕನ್ನ ಡೇತರ ಅಧಿಕಾರಿ ಸಿಬ್ಬಂದಿಗಳೇ ಇದ್ದು, ಅಂತಹ ಸಿಬ್ಬಂದಿಗಳು ಒಂದು ವರ್ಷದೊ ಳಗೆ ಕನ್ನಡ ಕಲಿಯಬೇಕೆಂಬ ನಿಯಮವಿ ದ್ದರೂ, ಅದು ಪಾಲನೆಯಾಗುತ್ತಿಲ್ಲ. ಇದ ರಿಂದಾಗಿ ಸ್ಥಳೀಯರು ಅಂತಹ ಅಧಿಕಾರಿ ಗಳು, ಸಿಬ್ಬಂದಿಗಳೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಬೋಪಯ್ಯ ದೂರಿದರು. ಅಂತಹ ಬ್ಯಾಂಕ್‍ಗಳಲ್ಲಿ ಕನಿಷ್ಟ ಒಬ್ಬರನ್ನಾದರೂ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಅವರು ಸಲಹೆ ಮಾಡಿ ದರು. ಇದಕ್ಕೆ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಅವರುಗಳೂ ಧ್ವನಿಗೂಡಿಸಿ, ಕನ್ನಡ ತರಬೇತಿ ಶಿಬಿರಗಳನ್ನು ಆಯೋಜಿಸು ವಂತೆ ಸಲಹೆ ನೀಡಿದರು.

ಸಭೆಯಲ್ಲಿ ಎಂಎಲ್‍ಸಿ ಎಂ.ಪಿ. ಸುನಿಲ್ ಸುಬ್ರಮಣಿ , ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಕಾರ್ಪೋರೇಷನ್ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಚೇ ರಿಯ ಡಿಜಿಎಂ. ಎಸ್.ಎಲ್. ಗಣಪತಿ, ನಬಾರ್ಡ್‍ನ ಜಿಲ್ಲಾ ಪ್ರಬಂಧಕ ಎಂ.ಸಿ. ನಾಣಯ್ಯ ಹಾಜರಿದ್ದರು.

Translate »