ಮೈಸೂರು: ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಿಎಸ್‍ಐ-ಕೆಎಸ್‍ಡಿ ಬಿಷಪ್ ಮೋಹನ್ ಮನೋರಾಜ್ ಹೇಳಿದರು. ಮೈಸೂರಿನ ಸಿಎಸ್‍ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಆಸ್ಪತ್ರೆಯಲ್ಲಿ (ಮಿಷನ್ ಆಸ್ಪತ್ರೆ) ನಿರ್ಮಿಸಿರುವ ಮುಖ್ಯ ದ್ವಾರ, ಟೈಲ್ಸ್‍ನಿಂದ ಕೂಡಿದ ಪಾದಚಾರಿ ಮಾರ್ಗ, ನವೀಕೃತಗೊಂಡ ಮುಖ್ಯ ಕಟ್ಟಡ ಹಾಗೂ ನೂತನವಾಗಿ ನಿರ್ಮಿಸಿರುವ ಭದ್ರತಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಆಸ್ಪತ್ರೆಯಲ್ಲಿ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ನೀಡಲು ಇಂತಹ ಅಭಿವೃದ್ಧಿ…