ಮೈಸೂರು ಮಿಷನ್ ಆಸ್ಪತ್ರೆ ನವೀಕೃತ ಸೌಕರ್ಯಗಳ ಉದ್ಘಾಟನೆ
ಮೈಸೂರು

ಮೈಸೂರು ಮಿಷನ್ ಆಸ್ಪತ್ರೆ ನವೀಕೃತ ಸೌಕರ್ಯಗಳ ಉದ್ಘಾಟನೆ

December 2, 2018

ಮೈಸೂರು:  ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಿಎಸ್‍ಐ-ಕೆಎಸ್‍ಡಿ ಬಿಷಪ್ ಮೋಹನ್ ಮನೋರಾಜ್ ಹೇಳಿದರು.

ಮೈಸೂರಿನ ಸಿಎಸ್‍ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಆಸ್ಪತ್ರೆಯಲ್ಲಿ (ಮಿಷನ್ ಆಸ್ಪತ್ರೆ) ನಿರ್ಮಿಸಿರುವ ಮುಖ್ಯ ದ್ವಾರ, ಟೈಲ್ಸ್‍ನಿಂದ ಕೂಡಿದ ಪಾದಚಾರಿ ಮಾರ್ಗ, ನವೀಕೃತಗೊಂಡ ಮುಖ್ಯ ಕಟ್ಟಡ ಹಾಗೂ ನೂತನವಾಗಿ ನಿರ್ಮಿಸಿರುವ ಭದ್ರತಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ನೀಡಲು ಇಂತಹ ಅಭಿವೃದ್ಧಿ ಕೆಲಸಗಳು ನೆರವಾಗಲಿವೆ. ಅದೇ ರೀತಿ ಮುಂದಿನ ಎರಡು ವರ್ಷದೊಳಗೆ ಆಸ್ಪತ್ರೆಯಲ್ಲಿ ಸುಸ ಜ್ಜಿತ ಶಸ್ತ್ರಚಿಕಿತ್ಸಾ ಘಟಕ ನಿರ್ಮಾಣ ಮಾಡ ಲಾಗುವುದು ಎಂದು ತಿಳಿಸಿದರು.

1875ರ ಸಂದರ್ಭದಲ್ಲಿ ಭಾರತಕ್ಕೆ ಕ್ರಿಶ್ಚಿ ಯನ್ ಮಿಷನರಿಗಳು ಆಗಮನವಾಯಿತು. ಅದೇ ರೀತಿ ಅಂದಿನ ಮೈಸೂರು ಸಂಸ್ಥಾನಕ್ಕೂ ಮಿಷನರಿಗಳು ಬಂದರು. ಮೈಸೂರಿಗೆ ಬಂದ ಮಿಷನರಿ ಜಿ.ಡಬ್ಲ್ಯೂ.ಸಾಡೇ ತಾಯಿ -ಮಕ್ಕಳಿಗೆ ವೈದ್ಯಕೀಯ ಸೇವೆ ಕಲ್ಪಿಸಿ ಕೊಡಲು ಆಸ್ಪತ್ರೆ ಸ್ಥಾಪಿಸಲು ಚಿಂತಿಸಿ ದರು. ಇವರ ಈ ಆಲೋಚನೆ ಕಾರ್ಯ ಗತಗೊಳಿಸಲು ಅಂದಿನ ಮೈಸೂರು ಸಂಸ್ಥಾ ನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆ ಯರ್ ನೆರವಾದರು. ಇದರ ಫಲವಾಗಿ ಮೈಸೂರಿನಲ್ಲಿ 1906ರಲ್ಲಿ ಮಿಷನ್ ಆಸ್ಪತ್ರೆ ಸ್ಥಾಪನೆಯಾಯಿತು ಎಂದರು.

ಆ ಬಳಿಕ ರೆವರೆಂಡ್ ಹೋಲ್ಡ್ಸ್‍ವರ್ತ್ ಮಿಷನ್ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ವೈದ್ಯಕೀಯ ಸೇವೆ ವಿಸ್ತರಿಸಲು ಮುಂದಾ ದರು. ಇದಕ್ಕಾಗಿ ಅವರು ಇಂಗ್ಲೆಂಡ್‍ಗೆ ತೆರಳಿ ದೇಣಿಗೆ ಸಂಗ್ರಹಿಸಿ ಬಂದರು. ಹಂತ -ಹಂತವಾಗಿ ವೈದ್ಯಕೀಯ ಸೇವೆ ಹಾಗೂ ಮೂಲಭೂತ ಸೌಲಭ್ಯವನ್ನು ವಿಸ್ತರಿಸಿಕೊಂಡು ಬಂದಿರುವ ಮಿಷನ್ ಆಸ್ಪತ್ರೆ, ಇದೀಗ 113 ವರ್ಷಗಳನ್ನು ಪೂರೈಸಿ ಶತ ಮಾನ ಕಂಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ರಮೇಶ್ (ರಮಣಿ), ಮಾಜಿ ಸದಸ್ಯ ಸುಹೇಲ್ ಬೇಗ್, ಸಿಎಸ್‍ಐ -ಕೆಎಸ್‍ಡಿ ಉಪಾಧ್ಯಕ್ಷೆ ರೆ.ಸಿಸ್ಟರ್ ಸುಜಾತ, ಕಾರ್ಯದರ್ಶಿ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ಪಾಲಣ್ಣ, ಮೈಸೂರು ವಲ ಯದ ಅಧ್ಯಕ್ಷ ಗುರುಶಾಂತಯ್ಯ, ಮಿಷನ್ ಆಸ್ಪತ್ರೆಯ ನಿರ್ದೇಶಕಿ ಡಾ.ಜೆ.ಸುಗುಣ ಶಾಂತಿ, ಉಪ ನಿರ್ದೇಶಕ ಡಾ.ರುಬೇನ್ ಪ್ರಕಾಶ್ ಸೇರಿದಂತೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮತ್ತಿತರರು ಹಾಜರಿದ್ದರು.

Translate »