ಮೈಸೂರು: ಸರ್ವೀಸ್‍ಗೆ ಬಿಡಲಾಗಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಹೊಸ ಇನ್ನೋವಾ ಕಾರು ಸೇರಿದಂತೆ 50 ಲಕ್ಷ ರೂ. ಮೌಲ್ಯದ 3 ಕಾರು ಹಾಗೂ 2 ದ್ವಿಚಕ್ರ ವಾಹನಗಳ ಕದ್ದಿದ್ದ ಹೈಟೆಕ್ ಖದೀಮನನ್ನು ಮೈಸೂರು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್, 1ನೇ ಹಂತದ ಗುರಪ್ಪನಪಾಳ್ಯ ನಿವಾಸಿ ಪಿಲ್ಲಾಕಲ್ ನಜೀರ್ ಅಲಿಯಾಸ್ ಪಿ.ನಜೀರ್(56) ಬಂಧಿತ ಕಾರುಗಳ್ಳ. ನವೆಂಬರ್ 6ರಂದು ಬೆಂಗಳೂರಿನಲ್ಲಿ ಆತನನ್ನು ಸೆರೆ ಹಿಡಿದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದೇವರಾಜ, ವಿಜಯನಗರ…