ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಭೂಕುಸಿತ ಉಂಟಾ ಗಿದ್ದು, ಪ್ರಸಿದ್ದ ಪ್ರವಾಸಿತಾಣ ಮುನ್ನಾರ್ ರೆಸಾರ್ಟ್‍ನ ಮಾರ್ಗಗಳು ಮುಚ್ಚಿ ಹೋಗಿದೆ. ಸಧ್ಯ ಅಲ್ಲಿ 70 ಪ್ರವಾಸಿಗರು ಸಿಲುಕಿಕೊಂಡಿದ್ದು, ಇದ ರಲ್ಲಿಯೂ 20 ವಿದೇಶಿಯರು ಇದ್ದಾರೆ ಎಂದು ಹೇಳಲಾಗಿದೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನ್ಯವು ಹೆಲಿ ಕಾಪ್ಟರ್ ಬಳಸಿಕೊಂಡು ಹೆಚ್ಚುವರಿ ಪ್ರವಾಸಿಗರನ್ನು ಸ್ಥಳಾಂತರಿಸಿದೆ. ಮಳೆ ಮತ್ತು ಪ್ರವಾಹ ದಿಂದಾಗಿ ಅಪಾರ ಹಾನಿಗೊಳಗಾದ ಕೇರಳಕ್ಕೆ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ಸಾಧ್ಯವಿರುವ ಎಲ್ಲಾ ಸಹಾಯವನ್ನೂ ನೀಡುವುದಾಗಿ…