ಮೈಸೂರು: ಮೈಸೂರು ಸರ್ಕಾರಿ ಮುದ್ರಣಾಲಯದಿಂದ ರದ್ದಿ ಸಾಗಿಸುವ ನೆಪದಲ್ಲಿ ಸರ್ಕಾರಿ ಶಾಲಾ ಮಕ್ಕಳ ಪುಸ್ತಕಗಳನ್ನು ಸಾಗಿಸುತ್ತಿದ್ದ 3 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಂಗಳೂರು ಬನಶಂಕರಿಯ ರಾಜ್ಯ ಶಿಕ್ಷಣ ಪರಿಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ವಿಶ್ವನಾಥ್, ಮೈವಿವಿ ಪ್ರಸಾರಾಂಗ ಮತ್ತು ಮುದ್ರಣಾಲಯ ನಿರ್ದೇಶಕ ಸತೀಶ್, ಮೈಸೂರು ದಕ್ಷಿಣ ವಲಯ ಬಿಇಓ ನಾಗೇಶ್, ಡಯಟ್‍ನ ಪ್ರಾಂಶುಪಾಲರಾದ ಮಹದೇವಪ್ಪ, ಅಧ್ಯಾ ಪಕರಾದ ಮಂಜುನಾಥ್, ಅಮಿತ್, ರಾಜು, ತ್ರಿವೇಣಿ, ಶಿವಮ್ಮ ಅವರು…