ಮೈಸೂರು : ಮೈಸೂರಿನ ಹಲವೆಡೆ ಶನಿವಾರ ರಾತ್ರಿ ಜೋರು ಮಳೆ ಸುರಿಯಿತು. ಸಂಜೆಯಾಗುತ್ತಿದ್ದಂತೆ ಕಾರ್ಮೋಡ ಕವಿದು, ಮಿಂಚು, ಗುಡುಗು ಆರಂಭ ವಾಯಿತು. ಸುಮಾರು 7 ಗಂಟೆ ನಂತರ ಕೆಸಿ ನಗರ, ಜೆಸಿ ನಗರ, ಸಿದ್ದಾರ್ಥನಗರ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಜೆಪಿ ನಗರ, ಕುವೆಂಪುನಗರ, ಲಕ್ಷ್ಮೀ ಪುರಂ ಸೇರಿದಂತೆ ಹಲವು ಬಡಾವಣೆ ಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ರಭಸವಾಗಿ ಮಳೆ ಸುರಿಯಿತು. ತಗ್ಗು ಪ್ರದೇಶದಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ದ್ವಿಚಕ್ರ ವಾಹನ ಸವಾ ರರು, ಪಾದಚಾರಿಗಳು ಮಳೆಗೆ ಸಿಲುಕಿ,…
ರಂಗಭೂಮಿ ಮನುಷ್ಯನ ಅಹಂಕಾರವನ್ನ ಹತ್ತಿಕ್ಕುತ್ತದೆ
May 12, 2019ಮೈಸೂರು: ರಂಗ ಭೂಮಿ ಮನುಷ್ಯನಲ್ಲಿರುವ ಅಹಂಕಾರ ವನ್ನು ಮುರಿಯುತ್ತದೆ ಎಂದು ಹೆಸರಾಂತ ವಾಗ್ಮಿ ಪೆÇ್ರ.ಎಂ.ಕೃಷ್ಣೇಗೌಡ ಹೇಳಿದರು. ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇ ಜಿನ ಸಭಾಂಗಣದಲ್ಲಿ ಆದಮ್ಯ ರಂಗಶಾಲೆ ಆಯೋಜಿಸಿದ್ದ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾ ರಂಭವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿಯಲ್ಲಿ ಎಲ್ಲಾ ಕಲಾವಿದ ರನ್ನು ಒಂದೇ ಭಾವನೆಯಲ್ಲಿ ಕಾಣುತ್ತೇವೆ ಎಂಬುದಕ್ಕೆ ಚಿತ್ರನಟ ಶಂಕರ್ ನಾಗ್ ಅವರು ಅತ್ಯುತಮ ಉದಾಹರಣೆ. ಅವರು ಸಿನಿಮಾ ದಲ್ಲಿ ಅಭಿನಯಿಸುವಾಗ ಚಿತ್ರೀಕರಣದ ವೇಳೆ ವಿಶೇಷವಾಗಿ ಗಮನಿಸಿಕೊಳ್ಳಲಾಗುತ್ತಿತ್ತು. ಆದರೆ,…
ಮೈಸೂರು ಮಾನಸಗಂಗೋತ್ರಿಯಲ್ಲಿ ಶ್ರೀ ಬಸವೇಶ್ವರ ಅಧ್ಯಯನ ಕೇಂದ್ರ ಕಟ್ಟಡ ಕಾಮಗಾರಿಗೆ ಸುತ್ತೂರು ಶ್ರೀಗಳಿಂದ ಶಂಕುಸ್ಥಾಪನೆ
May 12, 2019ಮೈಸೂರು: ರಾಜ್ಯ ಸರ್ಕಾರದ ಅನುದಾನ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಮೈಸೂರು ವಿಶ್ವ ವಿದ್ಯಾನಿಲಯದ ಶ್ರೀ ಬಸವೇಶ್ವರ ಸಾಮಾ ಜಿಕ, ಪರಿಷ್ಕರಣಾ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ (ಶ್ರೀ ಬಸವೇಶ್ವರ ಅಧ್ಯ ಯನ ಕೇಂದ್ರ) ಕಟ್ಟಡ ಕಾಮಗಾರಿಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಮೈಸೂರಿನ ಮಾನಸಗಂಗೋತ್ರಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದ ಹಿಂಭಾಗ ದಲ್ಲಿ 900 ಚದರ ಮೀ. ವಿಸ್ತೀರ್ಣದಲ್ಲಿ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದೆ. ನೆಲ ಅಂತಸ್ತಿನ ಉದ್ದೇಶಿತ…
ಸಾವಯವ ರೈತರ ಕೃಷಿ ಉತ್ಪನ್ನಗಳು ಭರ್ಜರಿ ಮಾರಾಟ
May 12, 2019ಮೈಸೂರು: ಸಾವ ಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ಒದಗಿ ಸುವ ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ನಿಸರ್ಗ ಟ್ರಸ್ಟ್‍ನ ಸಾವಯವ ರೈತ ಸಂತೆ ಯಲ್ಲಿ ಶನಿವಾರ ಗ್ರಾಹಕರು ತರಕಾರಿ ಸೇರಿ ದಂತೆ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳನ್ನು ಖರೀದಿಸಿದರು. ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ಹ್ಯಾಪಿಮ್ಯಾನ್ ಉದ್ಯಾನವನದ ಬಳಿ ಟ್ರಸ್ಟ್‍ನ ಮಾರಾಟ ಕೇಂದ್ರದ ಎದುರು ಪ್ರತಿ ತಿಂಗಳ ಎರಡನೇ ಶನಿವಾರ ರೈತ ಸಂತೆ ಹಮ್ಮಿಕೊಳ್ಳುತ್ತ ಬರಲಾಗಿದ್ದು, ಅದೇ ರೀತಿ…
ಕುರುಬಾರಹಳ್ಳಿಯಲ್ಲಿ ಮನೆ ತೆರವಿಗೆ ತೀವ್ರ ವಿರೋಧ: ಹಿಂದೆ ಸರಿದ ಪಾಲಿಕೆ ಅಧಿಕಾರಿಗಳು
May 12, 2019ಮೈಸೂರು: ಸಾರ್ವಜನಿಕ ರಸ್ತೆ ಯಲ್ಲಿ ನಿರ್ಮಿಸಲಾಗಿದೆ ಎಂಬ ದೂರಿನನ್ವಯ ಮನೆ ತೆರವುಗೊಳಿಸಲು ಮುಂದಾದ ಪಾಲಿಕೆ ಅಧಿಕಾರಿಗಳು, ಮಾಲೀಕ ಹಾಗೂ ಅವರ ಸಂಬಂಧಿಕರ ತೀವ್ರ ವಿರೋ ಧದ ಹಿನ್ನೆಲೆಯಲ್ಲಿ ಬರಿಗೈಲಿ ಹಿಂದಿರುಗಿದ ಪ್ರಸಂಗ ಮೈಸೂರಿನ ಕುರುಬಾರಹಳ್ಳಿಯಲ್ಲಿ ಇಂದು ಬೆಳಿಗ್ಗೆ ಜರುಗಿದೆ. ಕುರುಬಾರಹಳ್ಳಿ 3ನೇ ಕ್ರಾಸ್‍ನಲ್ಲಿರುವ 77/1ನೇ ಸಂಖ್ಯೆಯ ಮನೆಗೆ ಹೊಂದಿಕೊಂಡಂತೆ ಸಾರ್ವಜನಿಕ ರಸ್ತೆಯಲ್ಲಿ ಮನೆ ನಿರ್ಮಿಸಲಾಗಿದ್ದು, ಓಡಾಡಲು ತೊಂದರೆಯಾಗಿರುವುದರಿಂದ ಕಟ್ಟಡ ತೆರವುಗೊಳಿಸು ವಂತೆ ಕುರುಬಾರಹಳ್ಳಿ ಜೆ.ಪ್ರಕಾಶ್ ಎಂಬುವರು ನೀಡಿದ ದೂರಿನನ್ವಯ ಪಾಲಿಕೆ ಆಯುಕ್ತರ ಸೂಚನೆಯಂತೆ ತಾವು ಪೊಲೀಸ್ ಭದ್ರತೆ…
ದ್ವಿಚಕ್ರ ವಾಹನಕ್ಕೆ ಬಡಿದ ನವಿಲು: ಇಬ್ಬರಿಗೆ ಗಾಯ
May 12, 2019ಮೈಸೂರು: ನವಿಲೊಂದು ರಸ್ತೆಗೆ ಅಡ್ಡಲಾಗಿ ಹಾರುವ ವೇಳೆ ದ್ವಿಚಕ್ರ ವಾಹನಕ್ಕೆ ಬಡಿದ ಪರಿಣಾಮ ಅದರಲ್ಲಿದ್ದ ಸವಾರರು ಗಾಯಗೊಂಡಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಬಳಿ ರಿಂಗ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಇಂದು ಬೆಳಿಗ್ಗೆ ಕನಕದಾಸ ನಗರದ ಕಡೆಯಿಂದ ಸ್ಕೂಟರ್‍ನಲ್ಲಿ ಯುವಕ ಮತ್ತು ಯುವತಿ ದಟ್ಟಗಳ್ಳಿಯ ಆರ್.ಟಿ.ನಗರದ ಕಡೆಗೆ ಹೋಗುತ್ತಿದ್ದಾಗ ರಿಂಗ್ ರಸ್ತೆಯ ಊರುಕಾತೇಶ್ವರಿ ದೇವಾಲಯದ ಬಳಿ ಬಲ ಭಾಗದಿಂದ ನವಿಲೊಂದು ರಸ್ತೆಗೆ ಅಡ್ಡಲಾಗಿ ಹಾರಿತು. ಹೀಗೆ ಹಾರಿದ ನವಿಲು ದ್ವಿಚಕ್ರ ವಾಹ ನಕ್ಕೆ ಬಡಿದಿದ್ದ ರಿಂದ ಅದರ…
ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತಕುಮಾರ್ ಅವರಿಗೆ ಅಭಿನಂದನೆ
May 12, 2019ಮೈಸೂರು: ಪ್ರತಿ ಯೊಬ್ಬರೂ ಎತ್ತರದ ಕನಸು ಕಂಡು, ಅದನ್ನು ನನಸಾಗಿಸುವ ಆತ್ಮವಿಶ್ವಾಸ ರೂಡಿಸಿಕೊಳ್ಳುವತ್ತ ಗಮನ ಕೇಂದ್ರೀ ಕರಿಸಬೇಕೆಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾ ಸ್ವಾಮೀಜಿ ಸಲಹೆ ನೀಡಿದರು. ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ಅವರ ಅಭಿ ನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರೂ ಕನಸು ಕಾಣುವುದು ಹಾಗೂ ಕಂಡ ಕನಸ್ಸನ್ನು ನನಸಾಗಿಸುವ ಕೆಲಸವನ್ನು ಕಡ್ಡಾಯವಾಗಿ ಮಾಡಿದಾಗ ಮಾತ್ರ ತಾವೂ…
ಛಾಯಾಪತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದ ಬಗ್ಗೆ ನಾಡೋಜ ಪ್ರೊ.ನಿಸಾರ್ ಅಹಮದ್, ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಬೇಸರ
May 11, 2019ಮೈಸೂರು: ಸಾವಿರಕ್ಕೂ ಹೆಚ್ಚಿನ ಕೃತಿಗಳ ಪ್ರಕಾಶಕರಾದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಟಿ.ಎಸ್.ಛಾಯಾಪತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯ ದಿರುವ ಬಗ್ಗೆ ಹಿರಿಯ ಸಾಹಿತಿ, ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಹಾಗೂ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಹೊಯ್ಸಳ ಕರ್ನಾಟಕ ಸಂಘದ ಸಭಾಂ ಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಟಿ.ಎಸ್.ಛಾಯಾ ಪತಿ-75 ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ,…
ಕಲಾ ಕೌಶಲ್ಯ ಪ್ರದರ್ಶನದೊಂದಿಗೆ ಸಂಭ್ರಮಿಸಿದ ಮಕ್ಕಳು
May 11, 2019ಮೈಸೂರು: ಈ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಹದಿನೈದು ದಿನಗಳ ಕಾಲ ಹಾಡು, ನೃತ್ಯ, ನಾಟಕ ಕಲಿತರು. ಸಂಪನ್ಮೂಲ ವ್ಯಕ್ತಿಗಳಿಂದ ನಾನಾ ವಿಚಾರಗಳ ಬಗ್ಗೆ ತಿಳಿದುಕೊಂಡರು. ಮಣ್ಣಿನಿಂದ ನಾನಾ ರೀತಿಯ ಬೊಂಬೆಗಳನ್ನು ಮಾಡಿದರು. ಪೇಪರ್‍ನಿಂದ ನಾನಾ ತರಹದ ವಿನ್ಯಾಸಗಳನ್ನು ರಚಿಸಿ, ತಮ್ಮ ಕಲಾಕೌಶಲ್ಯ ಪ್ರದರ್ಶಿಸಿದರು. ಮೈಸೂರಿನ ಬನ್ನಿಮಂಟಪ ಬಾಲಭವನ ಆವರಣದಲ್ಲಿ ಬಾಲ ಭವನ ಆಯೋಜಿಸಿದ್ದ 15 ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಹಿರಿಯ ಪ್ರಾಥಮಿಕ ಶಾಲೆಯ 140 ಮಕ್ಕಳು ಶಿಬಿರದ ಸಮಾರೋಪ ದಿನವಾದ ಶುಕ್ರವಾರ (ಮೇ…
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ
May 11, 2019ಮೈಸೂರು: ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಶುಕ್ರವಾರ ಕಲಾಮಂದಿರದ ಮನೆಯಂಗಳದಲ್ಲಿ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಜ್ಯೋತಿ ಮತ್ತು ಅಪರ ಜಿಲ್ಲಾಧಿಕಾರಿ ಅನುರಾಧ.ಜಿ ರವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯ ಕೋರಿದರು. ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜ್ಯೋತಿ ಸರ್ಕಾರದ ವತಿಯಿಂದ ಶಿವಶರಣೆ ಹೇಮರೆಡ್ಡಿ…