ಮೈಸೂರಿನ ಹಲವೆಡೆ ಭಾರೀ ಮಳೆ
ಮೈಸೂರು

ಮೈಸೂರಿನ ಹಲವೆಡೆ ಭಾರೀ ಮಳೆ

May 12, 2019

ಮೈಸೂರು : ಮೈಸೂರಿನ ಹಲವೆಡೆ ಶನಿವಾರ ರಾತ್ರಿ ಜೋರು ಮಳೆ ಸುರಿಯಿತು.
ಸಂಜೆಯಾಗುತ್ತಿದ್ದಂತೆ ಕಾರ್ಮೋಡ ಕವಿದು, ಮಿಂಚು, ಗುಡುಗು ಆರಂಭ ವಾಯಿತು. ಸುಮಾರು 7 ಗಂಟೆ ನಂತರ ಕೆಸಿ ನಗರ, ಜೆಸಿ ನಗರ, ಸಿದ್ದಾರ್ಥನಗರ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಜೆಪಿ ನಗರ, ಕುವೆಂಪುನಗರ, ಲಕ್ಷ್ಮೀ ಪುರಂ ಸೇರಿದಂತೆ ಹಲವು ಬಡಾವಣೆ ಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ರಭಸವಾಗಿ ಮಳೆ ಸುರಿಯಿತು.

ತಗ್ಗು ಪ್ರದೇಶದಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ದ್ವಿಚಕ್ರ ವಾಹನ ಸವಾ ರರು, ಪಾದಚಾರಿಗಳು ಮಳೆಗೆ ಸಿಲುಕಿ, ಪರದಾಡಿದರು. ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕಗ್ಗತ್ತಲು ಆವರಿಸಿತ್ತು. ಕುವೆಂಪುನಗರ ಕಾಮಾಕ್ಷಿ ಆಸ್ಪತ್ರೆ ಬಳಿ ಕೊಂಬೆಯೊಂದು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೂಡಲೇ ನಗರಪಾಲಿಕೆ ಅಭಯ ತಂಡ ಕೊಂಬೆ ಯನ್ನು ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಗಾಳಿಯ ತೀವ್ರತೆ ಕಡಿಮೆಯಿದ್ದ ಕಾರಣ ಹೆಚ್ಚಿನ ತೊಂದರೆ ಉಂಟಾಗಲಿಲ್ಲ. ಆದರೆ ಬನ್ನಿಮಂಟಪ, ಹೆಬ್ಬಾಳು, ವಿವಿಪುರಂ ಇನ್ನಿತರ ಬಡಾವಣೆಗಳಲ್ಲಿ ಮಳೆಯಾಗಿಲ್ಲ ಎಂದು ತಿಳಿದುಬಂದಿದೆ.

Translate »