ಮೈಸೂರು, ಮಾ.2(ಎಸ್‍ಬಿಡಿ)-ಮೈಸೂರಿನ ಮಹಾರಾಜ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ರಾಮಸ್ವಾಮಿ ವೃತ್ತ- ಅಗ್ನಿಶಾಮಕ ಠಾಣೆ ರಸ್ತೆಯಲ್ಲಿರುವ ಹಾಸ್ಟೆಲ್ ಆವರಣದಲ್ಲಿ ಜಮಾವಣೆಗೊಂಡ ವಿದ್ಯಾರ್ಥಿಗಳು ಶೌಚಾಲಯ, ಸ್ನಾನದ ಕೊಠಡಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಮೂಲ ಸೌಕರ್ಯವನ್ನು ಸಮರ್ಪಕ ವಾಗಿ ಕಲ್ಪಿಸುವಂತೆ ಆಗ್ರಹಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆರಳೆಣಿಕೆಯಷ್ಟು ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿವೆ. ಅದರಲ್ಲೂ ಕೆಲವು ಕೊಠಡಿಗಳ ಬಾಗಿಲು ಮುರಿದು ಬಿದ್ದಿವೆ, ನಲ್ಲಿಗಳೂ ಇಲ್ಲ. ಕುಡಿಯಲು ಶುದ್ಧ ನೀರಿಲ್ಲ….
ಪ್ಯಾನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್‍ಗೆ ಮಾರ್ಚ್ 31 ಡೆಡ್‍ಲೈನ್: ತಪ್ಪಿದರೆ 10 ಸಾವಿರ ರೂ. ದಂಡ..!
March 3, 2020ಹೊಸದಿಲ್ಲಿ, ಮಾ.2- ಮಾರ್ಚ್ 31ರ ಗಡುವಿನೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜತೆ ಜೋಡಣೆ ಮಾಡದೇ ಹೋದರೆ, ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಒಂದು ವೇಳೆ ನೀವು ನಿಷ್ಕ್ರಿಯ ಕಾರ್ಡ್ ಅನ್ನೇ ಬಳಸಿದರೆ 10,000 ರೂ. ದಂಡ ತೆರಬೇಕಾಗುತ್ತದೆ. ಪ್ಯಾನ್-ಆಧಾರ್ ಜೋಡಣೆ ಸಂಬಂಧ ಗಡುವುಗಳನ್ನು ವಿಸ್ತರಿಸುತ್ತಲೇ ಬಂದಿರುವ ಆದಾಯ ತೆರಿಗೆ ಇಲಾಖೆ, ಈಗ ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಮಾರ್ಚ್ 31ರೊಳಗೆ ಜೋಡಣೆ ಮಾಡದೇ ಹೋದರೆ, ನಿಮ್ಮ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದ ನಿಷ್ಕ್ರಿಯವಾಗುತ್ತದೆ. ನಿಷ್ಕ್ರಿಯ ಪ್ಯಾನ್ ಅನ್ನೇ…
ವಿಧಾನಸಭೆಯಲ್ಲಿ ಧರಣಿ, ಗದ್ದಲದ ಮಧ್ಯೆ ವಿಧೇಯಕಗಳ ಮಂಡನೆ, ವಂದನಾ ನಿರ್ಣಯ ಅಂಗೀಕಾರ
March 3, 2020ಬೆಂಗಳೂರು, ಮಾ.2- ಹಿರಿಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರದಲ್ಲಿ ನಡೆಯುತ್ತಿದ್ದ ಧರಣಿ ನಡುವೆಯೇ ಹಲವು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಬಳಿಕ ಗದ್ದಲದ ನಡುವೆ ಸ್ಪೀಕರ್ ಎಂಟು ವಿಧೇಯಕಗಳ ಮಂಡನೆಗೆ ಅನುಮತಿ ನೀಡಿದ್ದು, ಗದ್ದಲದ ಮಧ್ಯೆಯೇ ಎಂಟು ವಿಧೇಯಕಗಳನ್ನು ಮಂಡಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದುಕೊಂಡರು. ಬಳಿಕ ಮುಖ್ಯಮಂತ್ರಿ ಅವರು 2020ನೇ ಸಾಲಿನ ಕರ್ನಾಟಕ ಪೌರ ಸೇವೆಗಳ…