ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಸರ್ವೆ ನಂ 1ರಲ್ಲಿ 150 ಕೋಟಿ ರೂ. ಮೌಲ್ಯದ 11 ಎಕರೆ 38 ಗುಂಟೆ ಸರ್ಕಾರಿ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಗುರುವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವು ಗೊಳಿಸುವ ಮೂಲಕ ವಶಕ್ಕೆ ಪಡೆಯಿತು. ಮಹಾತ್ಮಗಾಂಧಿ ರಸ್ತೆಯಲ್ಲಿ ಮಾಲ್ ಆಫ್ ಮೈಸೂರು ಹಾಗೂ ತರಕಾರಿ ಸಗಟು ಮಾರುಕಟ್ಟೆ ನಡುವೆ ಇರುವ ದೊಡ್ಡಕೆರೆಗೆ ಸೇರಿರುವ 11 ಎಕರೆ 38 ಗುಂಟೆ ಭೂಮಿಗೆ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೇಲಿ ಹಾಕಿ…