150 ಕೋಟಿ ಮೌಲ್ಯದ ದೊಡ್ಡಕೆರೆ ಆಸ್ತಿ ಮೈಸೂರು ಜಿಲ್ಲಾಡಳಿತದ ವಶಕ್ಕೆ
ಮೈಸೂರು

150 ಕೋಟಿ ಮೌಲ್ಯದ ದೊಡ್ಡಕೆರೆ ಆಸ್ತಿ ಮೈಸೂರು ಜಿಲ್ಲಾಡಳಿತದ ವಶಕ್ಕೆ

January 11, 2019

ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಸರ್ವೆ ನಂ 1ರಲ್ಲಿ 150 ಕೋಟಿ ರೂ. ಮೌಲ್ಯದ 11 ಎಕರೆ 38 ಗುಂಟೆ ಸರ್ಕಾರಿ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಗುರುವಾರ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ ತೆರವು ಗೊಳಿಸುವ ಮೂಲಕ ವಶಕ್ಕೆ ಪಡೆಯಿತು.

ಮಹಾತ್ಮಗಾಂಧಿ ರಸ್ತೆಯಲ್ಲಿ ಮಾಲ್ ಆಫ್ ಮೈಸೂರು ಹಾಗೂ ತರಕಾರಿ ಸಗಟು ಮಾರುಕಟ್ಟೆ ನಡುವೆ ಇರುವ ದೊಡ್ಡಕೆರೆಗೆ ಸೇರಿರುವ 11 ಎಕರೆ 38 ಗುಂಟೆ ಭೂಮಿಗೆ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೇಲಿ ಹಾಕಿ ಫಲಕ ಅಳವಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿಗಳ ಸೂಚನೆ ಮೇರೆಗೆ ಇಂದು ಬೆಳಿಗ್ಗೆ ತಹಶೀಲ್ದಾರ್ ಟಿ.ರಮೇಶ್‍ಬಾಬು ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿ, ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಯಿತು. ಅತಿಕ್ರಮವಾಗಿ ಪ್ರವೇಶಿ ಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸು ವುದಾಗಿ ತಹಶೀಲ್ದಾರ್ ಎಚ್ಚರಿಸಿದರು.

ಮೈಸೂರು ಸರ್ವೇ ನಂ.1ರಲ್ಲಿ ದೊಡ್ಡ ಕೆರೆಗೆ ಸೇರಿದ 145 ಎಕರೆ 13 ಗುಂಟೆ ಜಮೀನಿದೆ. ಇದರಲ್ಲಿ 11 ಎಕರೆ 38 ಗುಂಟೆ ಭೂಮಿಗೆ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಬೇಲಿ ಹಾಕಿತ್ತು. ಈ ಭೂಮಿಯಲ್ಲಿ ಲೇಔಟ್ ನಿರ್ಮಿಸುವ ಸಂಬಂಧ ಮುಡಾಗೆ ಯೋಜನಾ ವರದಿ ಸಲ್ಲಿಸಿತ್ತು. ಒಮ್ಮೆ 50ಘಿ80 ಅಳತೆಯ 56 ನಿವೇಶನಗಳು ಹಾಗೂ 14 ಮೂಲೆ ನಿವೇಶನಗಳು ಸೇರಿದಂತೆ 70 ನಿವೇಶನಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದ ಮುಡಾ, ನಂತರದ ಒಂದೇ ವರ್ಷದಲ್ಲಿ ಉಪ ವಿಭಾ ಗಾಧಿಕಾರಿ ಸಲ್ಲಿಸಿದ ವರದಿ ಮೇರೆಗೆ ಈ ಹಿಂದೆ ನೀಡಿದ್ದ ಬಡಾವಣೆ ನಿರ್ಮಾಣದ ಪ್ಲಾನ್ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ವಿವಾದಿತ ಸ್ಥಳಕ್ಕೆ ನಿವೇಶನ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೇಲಿ ಹಾಕಿತ್ತು.

ಆಕ್ಷೇಪ : ಬೇಲಿ ಹಾಗೂ ಫಲಕ ತೆರವು ಮಾಡಲು ತಹಶೀಲ್ದಾರ್ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಸ್ಥಳಕ್ಕೆ ದೊಡ್ಡಕೆರೆ ಟ್ಯಾಂಕ್ ಬಂಡ್ ನಿವೇಶನ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನಿವೇಶನ ಖರೀದಿಸಿರುವವರು ಬಂದು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಂಘದ ಸದಸ್ಯರು ಮತ್ತು ತಹಶೀಲ್ದಾರ್ ರಮೇಶ್ ಬಾಬು ನಡುವೆ ಮಾತಿನ ಚಕಮಕಿ ನಡೆಯಿತು.

ಈ ಭೂಮಿಯನ್ನು ನಾವು ಖರೀದಿಸಿದ್ದೇವೆ. ನಮ್ಮ ಬಳಿ ಲೇಔಟ್‍ಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳಿವೆ. ಪ್ರತಿವರ್ಷ ಕಂದಾಯ ಕಟ್ಟುತ್ತಿz್ದÉೀವೆ. ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ತೆರವು ಕಾರ್ಯಾಚರಣೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಸಂಘದ ಸದಸ್ಯರು ತಕರಾರು ತೆಗೆದರು.

ನಗರ ನಕ್ಷೆಯಲ್ಲಿ ಈ ಸ್ಥಳವನ್ನು ದೊಡ್ಡಕೆರೆ ಟ್ಯಾಂಕ್ ಬಂಡ್ ನಿವೇಶನ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಆಸ್ತಿಯೆಂದು ಗುರುತಿಸಲಾಗಿದೆ. ನ್ಯಾಯಾ ಲಯಕ್ಕೆ ಸಮರ್ಪಕವಾಗಿ ದಾಖಲೆ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದೀರಿ. ಈಗ ಕೆರೆ ಆಸ್ತಿ, ಬೆಲೆಬಾಳುವ ಆಸ್ತಿ ಎಂದು ತೆರವು ಮಾಡುವುದಕ್ಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ತಹಶೀಲ್ದಾರ್ ಟಿ.ರಮೇಶ್ ಬಾಬು ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ಮಾಡುತ್ತಿ z್ದÉೀವೆ. ಸುಪ್ರಿಂಕೋರ್ಟ್ ಕೆರೆಗಳನ್ನು ರಕ್ಷಿಸುವಂತೆ ಆದೇಶಿಸಿದೆ. ಇದರಿಂದಾಗಿಯೇ ಮುಡಾದಿಂದ ಲೇಔಟ್ ಪ್ಲಾನ್‍ಗೆ ಅನುಮೋದನೆ ನೀಡಿಲ್ಲ. ಒಂದು ವೇಳೆ ಮುಡಾ ದಿಂದ ಈ ಬಡಾವಣೆಗೆ ಅನುಮತಿ ದೊರೆತರೆ ಈ ಭೂಮಿಯನ್ನು ಬಿಟ್ಟುಕೊಡುತ್ತೇವೆ. ಆದರೆ ಈಗ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂದರು. ನಿವೇಶನ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರನ್ನು ಪೊಲೀಸರು ದೂರ ಕಳುಹಿಸಿದರು. ನಂತರ ಬೇಲಿ ಹಾಗೂ ಫಲಕಗಳನ್ನು ಕಿತ್ತು ಹಾಕಿ ಭೂಮಿಯನ್ನು ತಹಶೀಲ್ದಾರ್ ವಶಕ್ಕೆ ಪಡೆದರು.

ಮುಡಾ ಮತ್ತು ಪಾಲಿಕೆ ಯಡವಟ್ಟು: ಸರ್ಕಾರಿ ಭೂಮಿಯಾಗಿದ್ದರೂ ದಾಖಲೆಗಳನ್ನು ಪರಿಶೀಲಿಸದೆ ನಗರ ಪಾಲಿಕೆ ಈ ಕೆರೆ ಜಾಗಕ್ಕೆ 2002-03ರಲ್ಲಿ ಖಾತೆ ಮಾಡಿಕೊಟ್ಟು ಕಂದಾಯ ಸಂಗ್ರಹಿಸುತ್ತಿದ್ದರೆ, ಮುಡಾ ಆಡಳಿತ ಬಡಾವಣೆ ನಿರ್ಮಾಣದ ಪ್ಲಾನ್‍ಗೆ ಸಮ್ಮತಿ ನೀಡಿ ಲೋಪವೆಸಗಿದೆ. ಮುಡಾ ಈ ಭೂಮಿಯಲ್ಲಿ ಬಡಾವಣೆ ನಿರ್ಮಾಣ ಮಾಡುವುದಕ್ಕೆ 2004ರ ಫೆ.12ರಂದು ಅನುಮೋದನೆ ನೀಡಿ, 70 ಸೈಟ್ ನಿರ್ಮಿಸುವುದಕ್ಕೆ ಅನುಮತಿ ನೀಡಿದೆ. ಸಾರ್ವಜನಿಕರಿಂದ ದೂರು ಸಲ್ಲಿಕೆಯಾದ ಬಳಿಕವಷ್ಟೇ ಭೂಮಿ ಸರ್ಕಾರಿ ಆಸ್ತಿಯೋ ಅಥವಾ ಖಾಸಗಿ ಆಸ್ತಿಯೋ ಎಂದು ಸ್ಪಷ್ಟನೆ ನೀಡುವಂತೆ 2005ರಲ್ಲಿ ಉಪವಿಭಾಗಾಧಿಕಾರಿಗೆ ಪತ್ರ ಬರೆದಿತ್ತು. ತನಿಖೆ ನಡೆಸಿದ ಉಪವಿಭಾಗಾಧಿಕಾರಿ ಸದರಿ ಆಸ್ತಿ ಸರ್ಕಾರಿ ಸ್ವತ್ತು. ಕೆರೆ ಆಸ್ತಿಯಾಗಿದ್ದು, ಬಡಾವಣೆ ನಿರ್ಮಾಣಕ್ಕೆ ಸಮ್ಮತಿ ನೀಡದಂತೆ ಸೂಚನೆ ನೀಡಿದರು. ಆ ನಂತರ ಮುಡಾ ತಾನು ಯೋಜನಾ ವರದಿಗೆ ನೀಡಿದ್ದ ಅನುಮತಿಯನ್ನು ರದ್ದು ಪಡಿಸಿತು.

ಹೈಕೋರ್ಟ್‍ನಲ್ಲಿ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಓನರ್ಸ್ ಅಸೋಸಿಯೇಷನ್‍ನವರು ರಿಟ್‍ಪಿಟಿಷನ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ರಿಟ್ ಅಪೀಲ್(5128/2016) ಹಾಕಿದ್ದೇವೆ. ಎರಡು ತಿಂಗಳ ಹಿಂದಷ್ಟೇ ನಿವೇಶನ ಮಾಲೀಕರ ಸಂಘದವರು ಈ ಕೆರೆ ಜಾಗದಲ್ಲಿ ಫಲಕವಾಗಿ ಹಾಕಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಪ್ರಯತ್ನಿಸಿದ್ದರು. ಇದರಿಂದ ಇಂದು ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಹಶೀಲ್ದಾರ್ ವಿವರ ನೀಡಿದರು. ಅನ್ಯಕ್ರಾಂತವಾಗದೆ, ದಾಖಲೆಗಳನ್ನು ಪರಿಶೀಲಿಸದೆ ಖಾತೆ ಮಾಡಿಕೊಟ್ಟಿರುವ ಪಾಲಿಕೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಹಶೀಲ್ದಾರ್ ತಿಳಿಸಿದರು. ಕಾರ್ಯಾಚರಣೆಗೆ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ಬಳಸಿಕೊಳ್ಳಲಾಗಿತ್ತು.

Translate »