ಮೈಸೂರು: ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಬಿದ್ದ ಸಿಮೆಂಟ್ ಲಾರಿಯೊಂದು ಮೈಸೂರು-ನಂಜನ ಗೂಡು ರಸ್ತೆಯಲ್ಲಿ ಬಂಡಿಪಾಳ್ಯ ಬಳಿ ರಿಂಗ್ ರೋಡ್ ಸಿಗ್ನಲ್‍ನಲ್ಲಿ ಗುಡಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಜೆ ನಡೆದಿದೆ. ಈ ಘಟನೆಯಿಂದ ಬಸವೇಶ್ವರ ಗುಡಿಯ ಅರ್ಚಕ ಅನ್ನದಾನಪ್ಪ, ಗುಡಿಯ ಮುಂಭಾಗ ಬಸ್ಸಿಗೆ ಕಾಯುತ್ತ ನಿಂತಿದ್ದ ರವಿಚಂದ್ರ ಮತ್ತು ವಿನಾಯಕ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡಿಮೊಹಲ್ಲಾದ ನಿವಾಸಿ, ಲಾರಿ ಚಾಲಕ ರಾಘವೇಂದ್ರ, ಮೈಸೂರಿನಿಂದ ನಂಜನಗೂಡು ಕಡೆಗೆ ಸಿಮೆಂಟ್ ತುಂಬಿದ…