ಮೈಸೂರು: ಮೈಸೂರಿನಲ್ಲಿ ಶಬ್ಧ ಮಾಲಿನ್ಯ ಹೆಚ್ಚುತ್ತಿದ್ದು, ಅದರಲ್ಲೂ ಆಸ್ಪತ್ರೆ, ಚಿಕಿತ್ಸಾಲಯಗಳ ಬಳಿಯೇ ಹೆಚ್ಚಾಗಿ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ವಾಹನಗಳ ಕರ್ಕಶ ಹಾರನ್‍ಗಳಿಂದ ಆಸ್ಪತ್ರೆ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ದೂರುಗಳಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಶಬ್ಧ ಮಾಲಿನ್ಯ ಹೆಚ್ಚಾಗಿದೆ. ಒಂದೆಡೆ ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಇರ್ವಿನ್ ರಸ್ತೆಗಳ ಮಧ್ಯೆ ಇರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಶಬ್ಧ ಮಾಲಿನ್ಯದಿಂದ ಹೆಚ್ಚು ತೊಂದರೆಯಾಗುತ್ತಿದೆ. ಆಯುರ್ವೇದ ವೃತ್ತದಲ್ಲಂತೂ ವಾಹನಗಳ…
ಮೈಸೂರು
ಶಾಲಾ-ಕಾಲೇಜು ವಾಹನ ತಪಾಸಣೆ
June 14, 2018ಮೈಸೂರು: ಮೈಸೂರು ಪೂರ್ವ ಉಪ ಸಾರಿಗೆ ಆಯುಕ್ತರು ಹಾಗೂ ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ಬರುವ ಶಾಲಾ ಕಾಲೇಜು ವಾಹನಗಳ ತಪಾಸಣೆ ಜೂನ್ 15 ರಂದು ಬೆಳಿಗ್ಗೆ 10-30 ರಿಂದ 12-30 ರವರೆಗೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಶಾಲಾ ಕಾಲೇಜು ವಾಹನಗಳ ಮಾಲೀಕರು ವಾಹನಗಳ ಜೊತೆಗೆ ಚಾಲ್ತಿಯಲ್ಲಿರುವ ವಾಹನದ ದಾಖಲಾತಿ, ಚಾಲಕರ ಚಾಲನಾ, ಅನುಜ್ಞಾ ಪತ್ರಯೊಂದಿಗೆ ಹಾಜರಾಗು ವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು
ಸಂಚಾರ ನಿಯಮ ಉಲ್ಲಂಘನೆ: 3119 ವಾಹನ ಸವಾರರಿಂದ 3.39 ಲಕ್ಷ ದಂಡ ವಸೂಲಿ
May 30, 2018ಮೈಸೂರು: ನಗರದಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ 3,119 ವಾಹನ ಸವಾರರಿಂದ 3,39,800 ರೂ. ದಂಡ ವಿಧಿಸಿದ್ದಾರೆ. ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಮತ್ತು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದರು.