ಸುತ್ತೂರು: ರೈತ ಮುಖಂಡರು ಸರ್ಕಾರವನ್ನು ಸಾಲ ಮನ್ನಾ ಮಾಡಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ, ದೇಶಕ್ಕೆ ಅನ್ನ ನೀಡುವ ರೈತರು ಅನ್ನಕ್ಕಾಗಿ ಕೈ ಚಾಚಬಾರದು ಎಂದು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ ತಿಳಿಸಿದರು. ಅವರು ನಂಜನಗೂಡು ತಾಲೂಕು ಸರಗೂರು ಗ್ರಾಮದ ರೈತ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜುರವರು ತೋಟಕ್ಕೆ ಇಂದು ಭೇಟಿ ನೀಡಿ ಮಾತ ನಾಡುತ್ತಾ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆದು ಅದರಲ್ಲೂ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ…