ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ
ಮೈಸೂರು

ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ

June 4, 2018

ಸುತ್ತೂರು:  ರೈತ ಮುಖಂಡರು ಸರ್ಕಾರವನ್ನು ಸಾಲ ಮನ್ನಾ ಮಾಡಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ, ದೇಶಕ್ಕೆ ಅನ್ನ ನೀಡುವ ರೈತರು ಅನ್ನಕ್ಕಾಗಿ ಕೈ ಚಾಚಬಾರದು ಎಂದು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ ತಿಳಿಸಿದರು. ಅವರು ನಂಜನಗೂಡು ತಾಲೂಕು ಸರಗೂರು ಗ್ರಾಮದ ರೈತ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜುರವರು ತೋಟಕ್ಕೆ ಇಂದು ಭೇಟಿ ನೀಡಿ ಮಾತ ನಾಡುತ್ತಾ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆದು ಅದರಲ್ಲೂ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಹೆಚ್ಚಿನ ಲಾಭ ಗಳಿಸಿ ರೈತನ ಆರ್ಥಿಕ ಮಟ್ಟ ಇನ್ನಷ್ಟು ಉತ್ತಮ ಗೊಳ್ಳುತ್ತದೆ ಎಂದರಲ್ಲದೇ, ಕಡಿಮೆ ನೀರು ಬಳಕೆಯಾಗುವಂತಹ ಬೆಳೆಗಳನ್ನು ಬೆಳೆದರೆ ಕೃಷಿಯ ಖರ್ಚು ಕಡಿಮೆ ಮಾಡು ವುದರ ಜೊತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ರೈತರು ಮಣ ್ಣನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ ಅದೇ ಮಣ್ಣು ನಮ್ಮ ಆರೋಗ್ಯವನ್ನು ಕಾಪಾ ಡುತ್ತದೆ. ಆದ್ದರಿಂದ ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿಯನ್ನು ಅಳವಡಿಸಿ ಕೊಳ್ಳಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು.

ಆದರೆ, ಇತ್ತೀಚಿನ ದಿನಗಳಲ್ಲಿ ರೈತರ ಹೆಸರು ಹೇಳಿಕೊಂಡು ರೈತರ ಸಾಲ ಮನ್ನಾ ಮಾಡಿ ಎಂದು ಕೇಳುವುದು ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದರಲ್ಲದೇ, ರೈತರು ಯಾವಾಗಲೂ ದೇಶಕ್ಕೆ ಅನ್ನ ನೀಡುವ ಅನ್ನದಾತರು, ನಾವು ಕೇಳುವವರಲ್ಲ, ಕೊಡುವವರು, ನಾವು ಬೆಳೆದ ಬೆಳೆ ಉತ್ತಮ ವಾಗಿದ್ದರೆ ಯಾವ ವ್ಯಾಪಾರಿಯಾದರೂ ನಮ್ಮ ಬಳಿಯೇ ಬಂದು ಉತ್ತಮ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾನೆ, ಆಗ ರೈತ ಸಾಲಗಾರನಾಗುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ನಗರ್ಲೆ ಕೃಷ್ಣನಾಯಕ, ಕಲ್ಮಳ್ಳಿ ಸುರೇಶ್ ಬಾಬು, ಗೋಣಹಳ್ಳಿ ಕುಮಾರ್, ಕಾರಾ ಪುರ ನಾಗರಾಜು, ಕಾರ್ಯ ಕುಮಾರ್, ಲಿಂಗರಾಜ ನಾಯಕ, ಸರಗೂರು ನಾಗೇಶ್, ಇಸ್ಮಾಯಿಲ್, ನಿಂಗರಾಜು, ನಾರಾಯಣ್, ಮಲ್ಲಿಕಾರ್ಜುನ ಆರಾಧ್ಯ, ನಂಜುಂಡಯ್ಯ, ಚಿನ್ನಸ್ವಾಮಿ, ರಾಜೇಶ್, ಸರಗೂರು ಸುತ್ತ ಮುತ್ತಲ ಗ್ರಾಮಸ್ಥರು ಹಾಜರಿದ್ದರು.

Translate »