ಕೆ.ಜಿ.ಕೊಪ್ಪಲು, ಜಯನಗರ ನಿವಾಸಿಗಳಿಂದ ಶಾಸಕ ಎಲ್.ನಾಗೇಂದ್ರಗೆ ಆತ್ಮೀಯ ಸನ್ಮಾನ
ಮೈಸೂರು

ಕೆ.ಜಿ.ಕೊಪ್ಪಲು, ಜಯನಗರ ನಿವಾಸಿಗಳಿಂದ ಶಾಸಕ ಎಲ್.ನಾಗೇಂದ್ರಗೆ ಆತ್ಮೀಯ ಸನ್ಮಾನ

June 4, 2018

ಮೈಸೂರು:  ಮೈಸೂರಿನ ಚಾಮರಾಜ ಕ್ಷೇತ್ರದ ನೂತನ ಶಾಸಕ ಎಲ್.ನಾಗೇಂದ್ರ ಅವರನ್ನು ಕನ್ನೇಗೌಡನ ಕೊಪ್ಪಲು ಹಾಗೂ ಜಯ ನಗರ ನಿವಾಸಿಗಳು, ಮೆರವಣ ಗೆಯಲ್ಲಿ ಕರೆದೊಯ್ದು, ಆತ್ಮೀಯವಾಗಿ ಅಭಿನಂದಿಸಿ, ಸಂಭ್ರಮಿಸಿದರು.

ಆದಿಶಕ್ತಿ ಬಂದಂತಮ್ಮ ಕಾಳಮ್ಮ ಛಾರಿಟಬಲ್ ಟ್ರಸ್ಟ್ ಹಾಗೂ ಕನ್ನೇಗೌಡನ ಕೊಪ್ಪಲು ಒಕ್ಕಲಿಗರ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಕನ್ನೇಗೌಡನಕೊಪ್ಪಲು ಹಾಗೂ ಜಯನಗರ ನಿವಾಸಿಗಳು, ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ಗ್ರಾಮದ ಕೀರ್ತಿ ಬೆಳಗಿದ ಎಲ್. ನಾಗೇಂದ್ರ ಅವರನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಗ್ರಾಮದ ಚಾಮುಂಡೇ ಶ್ವರಿ ದೇವಾಲಯದ ಬಳಿ ಯಿಂದ ನ್ಯೂ ಕಾಂತರಾಜ ಅರಸ್ ರಸ್ತೆ ಮೂಲಕ ಶ್ರೀ ಬಂದಂತಮ್ಮ ಕಾಳಮ್ಮ ಸಮುದಾಯ ಭವನದವರೆಗೆ ರಥದಲ್ಲಿ ಅದ್ಧೂರಿ ಮೆರವಣ ಗೆ ಯಲ್ಲಿ ಕರೆತಂದರು. ಮಂಗಳವಾದ್ಯ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣ ಗೆಯ ಮೆರುಗು ಹೆಚ್ಚಿಸಿದ್ದವು.

ಆದಿಶಕ್ತಿ ಬಂದಂತಮ್ಮ ಕಾಳಮ್ಮ ದೇವಾ ಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪಕ್ಕದ ಸಮುದಾಯ ಭವನದಲ್ಲಿ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮ ನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಲ್.ನಾಗೇಂದ್ರ ಅವರಿಗೆ ಮೈಸೂರು ಪೇಟ ತೊಡಿಸಿ, ಬೆಳ್ಳಿ ಗದೆ ಇನ್ನಿತರ ಸ್ಮರಣಕೆÉ ನೀಡಿ, ಆತ್ಮೀಯ ವಾಗಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಒಕ್ಕಲಿಗರ ಹಿತರಕ್ಷಣಾ ವೇದಿಕೆ, ಆದಿಶಕ್ತಿ ಬಂದಂತಮ್ಮ ಕಾಳಮ್ಮ ಛಾರಿಟಬಲ್ ಟ್ರಸ್ಟ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ವತಿಯಿಂದ ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ನೂರಾರು ಮಂದಿ ಹಿತೈಷಿಗಳು ಹೂಗುಚ್ಛ ನೀಡಿ, ನಾಗೇಂದ್ರ ಅವರಿಗೆ ಶುಭಕೋರಿ ದರು. ಈ ವೇಳೆ ಸಮುದಾಯ ಭವನದ ಹೊರ ಆವರಣದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಮಾಡಲಾಯಿತು.

ಶಾಸಕ ಎಲ್.ನಾಗೇಂದ್ರ ಅವರನ್ನು ಅಭಿನಂದಿಸಿ, ಆಶೀರ್ವದಿಸಿದ ಶ್ರೀ ಸೋಮನಾಥ ಸ್ವಾಮೀಜಿ ಅವರು ಮಾತ ನಾಡಿ, ಕನ್ನೇಗೌಡನ ಕೊಪ್ಪಲಿನ ಜನ ಕುಸ್ತಿ ಮಾಡಿಕೊಂಡು ಕಾಲ ಕಳೆಯುತ್ತಾರೆ ಎಂಬ ಅಪವಾದವನ್ನು ಎಲ್.ನಾಗೇಂದ್ರ ಅವರು ಅಳಿಸಿಹಾಕಿದ್ದಾರೆ. ರಾಜಕೀಯ ಇನ್ನಿತರ ಕ್ಷೇತ್ರಗಳಲ್ಲೂ ಇಲ್ಲಿನ ಜನ ಸಾಧನೆ ಮಾಡಬಲ್ಲರು. ಸಮಾಜವನ್ನು ಮುನ್ನಡೆಸಬಲ್ಲರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇವರ ಭವಿಷ್ಯ ಉತ್ತಮವಾಗಿರಲಿ. ಸಾರ್ವಜನಿಕರಿಗೆ ಒಳಿತಿಗಾಗಿ ಶ್ರಮಿಸುವ ಶಕ್ತಿ ಮತ್ತಷ್ಟು ಹೆಚ್ಚಲಿ ಎಂದು ಆಶಯ ವ್ಯಕ್ತಪಡಿಸಿದರು.

ನಾನು ನಿಮ್ಮ ಮನೆಮಗ: ಅಭಿನಂದನೆ ಸ್ವೀಕರಿಸಿ ಭಾವುಕರಾದ ಶಾಸಕ ಎಲ್. ನಾಗೇಂದ್ರ ಮಾತನಾಡಿ, ಕನ್ನೇಗೌಡನ ಕೊಪ್ಪಲಿನವರು ಏನು ಮಾಡಿದ್ದೀರಿ?. ಒಬ್ಬರಾದರೂ ಮೇಯರ್ ಆಗಿಲ್ಲ, ಮುಡಾ ಅಧ್ಯಕ್ಷರಾಗಿಲ್ಲ ಅಥವಾ ಶಾಸಕರಾಗಿಲ್ಲ ಎಂದು ಈ ಹಿಂದೆ ವ್ಯಂಗ್ಯ ಮಾಡಿದ್ದರು. ಆಗ ಯಾರಾದರೂ ಶಾಸಕರಾಗಬೇಕೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಆದರೆ ತಾಯಿ ಚಾಮುಂಡೇಶ್ವರಿ ದಯೆ ಹಾಗೂ ನಿಮ್ಮೆಲರ ಸಹಕಾರದಿಂದ ನನಗೇ ಅವಕಾಶ ಸಿಕ್ಕಿತು. ಮುಡಾ ಅಧ್ಯಕ್ಷನಾಗಿ, ಇದೀಗ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇನ್ನು ಇದೇ ಗ್ರಾಮದ ಆರ್.ಲಿಂಗಪ್ಪ ಅವರು ಮೇಯರ್ ಆಗಿದ್ದರು. ಅವರು ಮೇಯರ್ ಆದಾಗ ನಾನು ತುಂಬಾ ಸಂತೋಷಪಟ್ಟಿದ್ದೆ ಎಂದು ಹೇಳಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕನ್ನೇಗೌಡನ ಕೊಪ್ಪಲಿನಿಂದ ಯಾರಾದರೂ ಶಾಸಕರಾಗಬೇಕೆಂದು ಹೇಳುತ್ತಿದ್ದರು. ಇದೀಗ ಅವರ ಆಶೀ ರ್ವಾದದಿಂದ ನೆರವೇರಿದೆ. ಕಾಣದ ಕೈಗಳು ನನ್ನ ಗೆಲುವಿಗಾಗಿ ಶ್ರಮಿಸಿವೆ. ಕಳೆದ ಚುನಾವಣೆಯಲ್ಲಿ ಸೋತಿದ್ದ ನನ್ನನ್ನು 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಟ್ಟಿದ್ದೀರಿ. 3 ಬಾರಿ ನಗರ ಪಾಲಿಕೆ ಸದಸ್ಯ, ಮುಡಾ ಅಧ್ಯಕ್ಷನಾಗಿ ಕೆಲಸ ಮಾಡಿ ರುವ ನನ್ನನ್ನು ಶಾಸಕನನ್ನಾಗಿ ಮಾಡಿ ದ್ದೀರಿ ಎಂದು ಅಭಿನಂದನೆ ಸಲ್ಲಿಸಿದ ನಾಗೇಂದ್ರ, ರಾಜಕೀಯದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಆದರೆ ಸ್ವಾಭಿ ಮಾನದ ವಿಚಾರ ಬಂದಾಗ ಪಕ್ಷ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಬೇಕು. ನಾನು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸು ವಾಗ `ಕನ್ನೇಗೌಡನ ಕೊಪ್ಪಲಿನ ಎಲ್. ನಾಗೇಂದ್ರ ಆದ ನಾನು..’ ಎಂದು ಹೇಳುವಾಗ ಕಣ್ಣು ತುಂಬಿ ಬಂದಿತ್ತು. ಜನರ ಗೌರವ ಹೆಚ್ಚಿಸುವಂತೆ ಪ್ರಾಮಾಣ ಕ ವಾಗಿ ಕೆಲಸ ಮಾಡಿ, ಕ್ಷೇತ್ರವನ್ನು ಮಾದರಿ ಯಾಗಿಸುವ ನಿಟ್ಟಿನಲ್ಲಿ ಮುಂದುವರಿ ಯುತ್ತೇನೆಂದು ಭರವಸೆ ನೀಡಿದರು.

ಕನ್ನೇಗೌಡನ ಕೊಪ್ಪಲು ಒಕ್ಕಲಿಗರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಶಿವಕುಮಾರ್, ಉಪಾಧ್ಯಕ್ಷ ಆರ್.ಗಣೇಶ್, ಕಾರ್ಯ ದರ್ಶಿಯೂ ಆದ ನಗರ ಪಾಲಿಕೆ ಸದಸ್ಯ ಎಸ್.ಬಾಲು, ಖಜಾಂಚಿ ಶ್ರೀನಿವಾಸ್, ಗೌರವ ಅಧ್ಯಕ್ಷ ಕೊಪ್ಪಲು ರಾಜಣ್ಣ, ಗೌರವ ಸದಸ್ಯ ಬೋರಪ್ಪ, ಪಾಲಿಕೆ ಸದಸ್ಯರಾದ ಚನ್ನಪ್ಪ, ಕೆಂಪಣ್ಣ, ಮಾಜಿ ಸದಸ್ಯ ಶಂಕರ್, ಗ್ರಾಮದ ಮುಖಂಡರಾದ ಲಿಂಗಪ್ಪ, ಮಹದೇವಯ್ಯ, ರಾಮೇಗೌಡರು, ಪ್ರೊ.ಕೆ.ಆರ್.ರಂಗಯ್ಯ, ವಕೀಲ ಬಸವರಾಜು, ನಾರಾಯಣಗೌಡ, ದೇಸಿಗೌಡ, ಲಿಂಗೇಗೌಡ, ಸೀನಪ್ಪ, ಸೋಮಣ್ಣ, ಶಿವಪ್ಪ, ಕೃಷ್ಣಪ್ಪ, ದೇವರಾಜು ಸೇರಿದಂತೆ ಒಕ್ಕಲಿಗರ ಹಿತರಕ್ಷಣಾ ಸಮಿತಿ, ಆದಿಶಕ್ತಿ ಬಂದಂತಮ್ಮ ಕಾಳಮ್ಮ ಛಾರಿಟಬಲ್ ಟ್ರಸ್ಟ್‍ನ ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »