ರಾಮನಗರ: ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ಮಂಗಳ ವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಂಧನವಾದ ಬೆನ್ನಲ್ಲೇ ರಾಮನಗರದಲ್ಲಿ ಎರಡು ಸಜೀವ ಬಾಂಬ್‍ಗಳು ಬುಧವಾರ ಪತ್ತೆಯಾಗಿವೆ. ಈ ಮೂಲಕ ಸಂಭವಿಸಬಹು ದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ರಾಮನಗರದ ಟಿಪ್ಪು ನಗರದ 23ನೇ ವಾರ್ಡ್‍ನ ಸೇತುವೆ ಬಳಿ ಎನ್‍ಐಎ, ಗುಪ್ತಚರ ದಳ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯದಲ್ಲಿ ಎರಡು ಸಜೀವ ಬಾಂಬ್‍ಗಳು ಪತ್ತೆಯಾಗಿವೆ….