ವಿದ್ಯಾರ್ಥಿಗಳೊಂದಿಗೆ ಸಿಬ್ಬಂದಿ ಮಾತಿನ ಚಕಮಕಿ ವಿಡಿಯೋ ವೈರಲ್ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರ ಸೂಚನೆ* ಮೈಸೂರು,ಮಾ.29(MTY )- ಮಹಾಮಾರಿ ಸ್ವರೂಪ ತಾಳುತ್ತಿರುವ ನೊವೆಲ್ ಕೊರೊನಾ ವೈರಸ್ ಎಲ್ಲರನ್ನೂ ಭಯಬೀತಗೊಳಿಸಿದ್ದು, ಚೀನಾ ವಿದ್ಯಾರ್ಥಿಗಳೆಂದು ಭಾವಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಮೈಸೂರಿನ ಸೂಪರ್ ಮಾರ್ಕೆಟ್ ಸಿಬ್ಬಂದಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿಯಿರುವ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಬಂದಿದ್ದ ಮೂರ್ನಾಲ್ಕು ಮಂದಿ…